ಫೇಸ್ಬುಕ್ - ಸಾಮಾಜಿಕ ಮಾಧ್ಯಮಗಳ ದೈತ್ಯಕ್ಕಿಂದು 20ರ ಸಂಭ್ರಮ

ಫೇಸ್ಬುಕ್ - ಸಾಮಾಜಿಕ ಮಾಧ್ಯಮಗಳ ದೈತ್ಯಕ್ಕಿಂದು 20ರ ಸಂಭ್ರಮ




2004ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯಯ ವಿದ್ಯಾರ್ಥಿಗಳಿಗಾಗಿ ಅಭಿವೃದ್ಧಿ ಮಾಡಲಾಗಿದ್ದ "thefacebook‌.com" ಜಾಲತಾಣ, ಕೆಲವೇ ತಿಂಗಳಲ್ಲಿ ಬೇರೆ ವಿವಿಗಳಿಗೂ ವ್ಯಾಪಿಸಿ, Facebook ಆಗಿ ರೂಪಾಂತರಗೊಂಡು, ಇಂದು Meta ಆಗಿ ನಮ್ಮ ಮುಂದೆ ಇದೆ. 

ಹಾರ್ವರ್ಡ್ ನಿಂದ ಮೊದಲ್ಗೊಂಡು, ನಂತರ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಆಹ್ವಾನಿಸಿ, ಬಳಿಕ apple, Microsoft ಇತ್ಯಾದಿ ಕಂಪನಿಗಳ ಉದ್ಯೋಗಿಗಳಿಗೆ ಇಲ್ಲಿ ಖಾತೆ ತೆರೆಯಲು ಪ್ರೋತ್ಸಾಹಿಸಿ ಒಂದೆರಡು ವರ್ಷಗಳಲ್ಲಿ, ಕಾಡ್ಗಿಚ್ಚಿನಂತೆ ಇಡೀ ಜಗತ್ತಿಗೆ ವ್ಯಾಪಿಸಿದ ಕೀರ್ತಿ ಫೇಸ್ಬುಕ್ ನದ್ದು. 

ಗೊತ್ತಿರಲಿ, ಫೇಸ್ಬುಕ್ ಜನಕ ಮಾರ್ಕ್ ಜುಕರ್ಬರ್ಗ್ ಇಂದು ಜಗತ್ತಿನ ಟಾಪ್ 5 ಶ್ರೀಮಂತರ ಪೈಕಿ ಒಬ್ಬರು. ಫೇಸ್ಬುಕ್ ಇಂದು Meta ಸಂಸ್ಥೆಯಾದದ್ದು ಮಾತ್ರವಲ್ಲ, ಸಾಮಾಜಿಕ ಮಾಧ್ಯಮ ಕ್ಷೇತ್ರದಲ್ಲಿ ಬಹಳ ಎತ್ತರ ತಲುಪಿದೆ. Facebook ಜೊತೆಗೆ Messenger, Instagram (100 ಕೋಟಿ ಮಾಸಿಕ ಸಕ್ರಿಯ ಬಳಕೆದಾರರು), Threads, WhatsApp (200 ಕೋಟಿ ಮಾಸಿಕ ಸಕ್ರಿಯ ಬಳಕೆದಾರರು), Oculus VR (ವರ್ಚುವಲ್ ರಿಯಾಲಿಟಿ ಗೇಮಿಂಗ್ ಕಂಪನಿ) Onavo (ಇಸ್ರೇಲಿನ web analytics ಅಪ್ಲಿಕೇಶನ್), Beluga (ಗ್ರೂಪ್ ಮೆಸೇಜಿಂಗ್ ಅಪ್ಲಿಕೇಶನ್ - ಈಗ ಕಾರ್ಯನಿರ್ವಹಿಸುತ್ತಿಲ್ಲ) ಇತ್ಯಾದಿ ಕಂಪನಿಗಳನ್ನೂ ತನ್ಶ ತೆಕ್ಕೆಗೆ ಹಾಕಿಕೊಂಡಿದೆ. ಹೀಗೆ ಒಟ್ಟು 25ಕ್ಕೂ ಅಧಿಕ ಕಂಪನಿಗಳನ್ನು ಫೇಸ್ಬುಕ್ ಸ್ವಾಧೀನಪಡಿಸಿದೆ.

Social media ಜಗತ್ತಿನಲ್ಲಿ ಇಂದು Meta Monopoly ಸಾಧಿಸಿದೆ ಅಂದ್ರೂ ತಪ್ಪಾಗ್ಲಿಕ್ಕಿಲ್ಲ. ಕೋಟ್ಯಂತರ ಬಳಕೆದಾರರು Meta ಒಡೆತನದ app ಗಳಿಗೇ stick on ಆಗಿದ್ದಾರೆ. ಹೊಸ app ಕಡೆಗೆ Switch ಮಾಡ್ಸೋದು ಸದ್ಯಕ್ಕಂತೂ ಭಾರೀ ಕಷ್ಟ‌. 

2004 ರಲ್ಲಿ $0.4 ಮಿಲಿಯನ್ ವಾರ್ಷಿಕ ಆದಾಯ ಹೊಂದಿದ್ದ ಫೇಸ್ಬುಕ್, 2014ರಲ್ಲಿ $12,466 ಮಿಲಿಯನ್ ವಾರ್ಷಿಕ ಆದಾಯ ಗಳಿಸಿದೆ. ಇದು 2023ರಲ್ಲಿ $134,902 ಮಿಲಿಯನ್‌ಗೆ ಏರಿಕೆಯಾಗಿದೆ! ಇಂದು 80ಸಾವಿರಕ್ಕೂ ಅಧಿಕ ಉದ್ಯೋಗಿಗಳು Meta ದಲ್ಲಿ ಇದ್ದಾರೆ.!

ಮೆಟಾದಲ್ಲಿ 40 ಲಕ್ಷಕ್ಕೂ ಅಧಿಕ ಸಕ್ರಿಯ ಜಾಹೀರಾತುದಾರರು ಇದ್ದಾರೆ. ಈ ಕಾರಣಕ್ಕೆ ಇಂದು ಬಳಕೆದಾರರಿಗೆ ಬಹಳ customized ಜಾಹೀರಾತುಗಳು ಕಾಣಲು ಸಿಗುತ್ತಿದೆ!

ಬಿಲಿಯನ್‌ಗಟ್ಟಲೇ ಬಳಕೆದಾರರು meta application ಗಳನ್ನು ಬಳಸುತ್ತಿರೋದು ನಮಗೆಲ್ಲರಿಗೂ ತಿಳಿದೇ ಇದೆ. ಆದ್ರೆ ಇದರಲ್ಲಿ chinaದ ಪಾಲು ಬಹಳ ಕಡಿಮೆ. ಚೀನಾದಲ್ಲಿ meta ಸಂಸ್ಥೆಯನ್ನು block ಫೇಸ್ಬುಕ್ - ಸಾಮಾಜಿಕ ಮಾಧ್ಯಮಗಳ ದೈತ್ಯಕ್ಕಿಂದು 20ರ ಸಂಭ್ರಮ ಮಾಡಲಾಗಿದೆ. ಅಂದಾಜು 3-4 ಮಿಲಿಯನ್ (30-40 ಲಕ್ಷ) ಬಳಕೆದಾರರು ಇರಬಹುದು ಎಂದು ಅಂದಾಜಿಸಲಾಗಿದೆ. ಚೀನಾವೂ ಸೇರಿದ್ದರೆ, meta ಇನ್ನೂ ದೊಡ್ಡದಾಗಿ ಬೆಳೀತಿತ್ತು. ಜುಕರ್ಬರ್ಗ್ ಟಾಪ್ 3 ಶ್ರೀಮಂತರಾಗ್ತಿದ್ರೋ ಏನೋ. 

ಇನ್ನೊಂದು ಮಾಹಿತಿ, ಬಹುತೇಕ ಸಾಮಾಜಿಕ ಮಾಧ್ಯಮಗಳಿಗೆ ಇಂದು ಭಾರತವೇ ಟಾರ್ಗೆಟ್. 20-30% ಬಳಕೆದಾರರು ಭಾರತೀಯರೇ ಆಗಿರುತ್ತಾರೆ. ಹಾಗಾಗಿ ಒಂದ್ವೇಳೆ ಯಾವ್ದಾದ್ರೂ ಅಪ್ಲಿಕೇಶನ್ ಭಾರಯದಲ್ಲೇ ತಯಾರಾಗಿ, ಫೇಸ್ಬುಕ್ ಅನ್ನೂ ಮೀರಿಸಿ, ಭಾರತೀಯರನ್ನು ಆಕರ್ಷಿಸಿದರೆ, ಬಹುಶಃ ಫೇಸ್ಬುಕ್‌ಗೆ ತಕ್ಕಮಟ್ಟಿಗೆ ಠಕ್ಕರ್ ಕೊಡಬಹುದು!

ಮಾಹಿತಿ ಕೃಪೆ ಫೇಸ್ಬುಕ್ & ಗೂಗಲ್

||ಧರ್ಮೋ ರಕ್ಷತಿ ರಕ್ಷಿತಃ|| 🕉🚩