ಕಾಂತಾರ... ವೋಓಓಓಓಓ 🙏...

ಹೊಂಬಾಳೆ ಫಿಲಂಸ್ ನಿಂದ ನಿರ್ಮಾಣವಾಗಿದೆ ಮತ್ತೊಂದು ಅದ್ಭುತ ಚಿತ್ರ...


 ಇದು ಕಾಡು ಹಾಗೂ ನಾಡಿನ ಉಳುವಿಗಾಗಿ ನಡೆದ ಸಂಘರ್ಷದ  ದಂತಕಥೆಯ ದೃಶ್ಯವೈಭವ.....

ಕಾಂತಾರ" ಎಂದರೆ ಕಾಡು. ಕಾಡಿನ ಅಂಚಿನಲ್ಲಿರುವ ಜನರ ಆಚರಣೆ ಮತ್ತು ನಂಬಿಕೆಗಳ ಸುತ್ತ ಸುತ್ತುವ ಚಿತ್ರದಲ್ಲಿ ಮನುಷ್ಯ ಮತ್ತು ನಿಸರ್ಗದ ನಡುವಿನ ಸಂಘರ್ಷ ಇದೆ. ಆಚರಣೆ ಮತ್ತು ಸಂಸ್ಕೃತಿ ಮುಖ್ಯ ಎಂದು ನಂಬಿದ ಶಿವ ಒಂದು ಕಡೆಯಾದರೆ, ಪರಿಸರ ಮತ್ತು ಪ್ರಾಣಿಗಳಿಗೆ ಯಾವುದೇ ಸಮಸ್ಯೆ ಆಗಬಾರದು ಎನ್ನುವ ಫಾರೆಸ್ಟ್ ಆಫೀಸರ್ ಮುರಳಿ ಇನ್ನೊಂದು ಕಡೆ. ಇವರಿಬ್ಬರ ನಡುವಿನ ಸಂಘರ್ಷವೇ "ಕಾಂತಾರ".
ದೈವ ಬಲದ ಎದುರು ಮನುಷ್ಯನ ಯಾವ ಶಕ್ತಿಯೂ ನಿಲ್ಲಲಾರದು ಎಂದು ಮನಮುಟ್ಟುವಂತೆ ನಿರೂಪಿಸಿರುವ ಚಿತ್ರ...

ತುಳುನಾಡಿನಲ್ಲಿ ಹುಟ್ಟಿ ಬೆಳೆದವರಿಗೆ ಈ ಸಿನೆಮಾ ತಮ್ಮ ದಿನನಿತ್ಯದ ಬದುಕಿನ ಕ್ಷಣಗಳನ್ನು ಹಾಗೆ ಮತ್ತೊಮ್ಮೆ ಪರದೆಯ ಮೇಲೆ ತಂದು ಬಿಡುತ್ತದೆ

ತುಳುನಾಡು ಹೊರತು ಪಡಿಸಿ ಬೇರೆ ಜಿಲ್ಲೆಯ ಅಥವಾ ರಾಜ್ಯದ ಜನರಿಗೆ ಈ ಸಿನೆಮಾ ಖಂಡಿತವಾಗಿಯೂ ಒಂದು ಅದ್ಬುತ ಲೋಕವನ್ನೇ ಸೃಷ್ಟಿಸಿ ಬಿಡುತ್ತದೆ ಅದರಲ್ಲಿ ಸಂಶಯವಿಲ್ಲ...😍

ಯಾಕೆಂದರೆ ಕನ್ನಡ ಚಿತ್ರರಂಗದಲ್ಲಿ ಇದಕ್ಕೆ ಮುಂಚೆ ಹುಲಿ ವೇಷ ಯಕ್ಷಗಾನ ಮತ್ತು ಒಂದೆರಡು ದೃಶ್ಯ ಇಲ್ಲಿನ ದೈವ ದೇವರುಗಳ ಬಗ್ಗೆ ಬಂದಿರಬಹುದು ಆದರೆ ಈ ಚಿತ್ರ ಪೂರ್ಣ ಪ್ರಮಾಣದಲ್ಲಿ ಒಂದು ಊರಿನ ಜನರು ನಂಬಿರುವ ದೈವದ ಒಂದು ಕಥೆಯ ಜೊತೆಗೆ ದೈವಗಳ ಶಕ್ತಿ ಏನು ಎಂಬುವುದನ್ನು ತೋರಿಸುತ್ತದೆ..

ತುಳುನಾಡಿನಲ್ಲಿ ದೈವಗಳು ಮುಂದೆ ಧರ್ಮದ ದಾರಿ ತೊರೆದು ಅಧರ್ಮದ ದಾರಿ ಹಿಡಿದವರಿಗೆ ಕೊಟ್ಟ ಮಾತು ತಪ್ಪಿದವರಿಗೆ ಯಾವ ರೀತಿಯಲ್ಲಿ ತನ್ನ ಶಕ್ತಿಯನ್ನು ದೈವಗಳು ತೋರಿಸುತ್ತದೆ ಎಂಬುವುದು ಇಲ್ಲಿಯವರೆಗೆ ತಿಳಿದಿದೆ ಆದರೆ ಈ ಸಿನೆಮಾ ಮೂಲಕ ಹೊರಗಿನ ಪ್ರಪಂಚಕ್ಕೂ ದೈವರಾಧನೆ (ಭೂತಾರಾಧನೆ) ಶಕ್ತಿ ಏನು ಎಂಬುವುದನ್ನು ತೋರಿಸುವ ಪ್ರಯತ್ನವಂತು ಖಂಡಿತವಾಗಿಯೂ ಈ ಸಿನೆಮಾದಲ್ಲಿ ನಡೆದಿದೆ...🙏

ಈ ಪ್ರಯತ್ನ ಮಾಡಲು ಅಷ್ಟು ಸುಲಭವಂತೂ ಇಲ್ಲ
ಯಾಕೆಂದರೆ ಅದು ಬೇರೆ ವಿಚಾರದಂತೆ ಕೈಗೆಟಕುವ ವಿಚಾರವಲ್ಲ ಒಂದು ಮಣ್ಣಿನ ಜನರ ನಂಬಿಕೆ ಮಾತ್ರವಲ್ಲ ಬದುಕಿನ ಕಥೆ ಇದು, ದೈವದ ವಿಚಾರದಲ್ಲಿ ಅದೇ ರೀತಿಯ ದೃಶ್ಯ ಕಣ್ಣಿನ ಮುಂದೆ ತರಬೇಕಾದರೆ ಸುಲಭದ ಮಾತು ಖಂಡಿತವಾಗಿಯೂ ಅಲ್ಲ ಯಾಕೆಂದರೆ ಹಿರಿಯರಿಂದ ಮಾರ್ಗದರ್ಶನ ಪಡೆದಯದೆ ಮತ್ತು ದೈವಗಳ ವಿಚಾರ ತಿಳಿಯದೆ ಇಂತಹ ಸಿನೆಮಾ ಮಾಡಲು ಸಾಧ್ಯವೇ ಇಲ್ಲ ಮತ್ತು ಅದು ಮನರಂಜನೆಯ ವಿಷಯವು ಅಲ್ಲ ಎಂಬುವುದು ಮೊದಲು ತಿಳಿದಿರಬೇಕು....

ದೈವಗಳ ವಿಚಾರದಲ್ಲಿ ಸ್ವಲ್ಪ ಎಡವಿದರು ಈ ಮಣ್ಣಿನಲ್ಲಿ ನಡೆದು ಹೋದ ಅದೆಷ್ಟೋ ಭಯಾನಕ ಮತ್ತು ಎಚ್ಚರಿಕೆಯ ಸತ್ಯ ಕಥೆಗಳ ಇತಿಹಾಸ ತುಳುನಾಡಿನಲ್ಲಿ ಇದೆ...🤗

ತುಳುವಿನಲ್ಲಿ ಇಂತಹ ದೈವಗಳ ನಿಜ ಚರಿತ್ರೆಯ ಕಥೆಗಳ ಸಿನೆಮಾ ಬಂದಿದೆ ಆದರೆ ಅದು ಇಲ್ಲಿಯವರಿಗೆ ಮಾತ್ರ ಸೀಮಿತವಾಗುವ ಮಟ್ಟಿಗೆ ರಚನೆ ಆಯಿತು. ಆದರೆ ಪೂರ್ಣ ಪ್ರಮಾಣದಲ್ಲಿ ಇಲ್ಲಿಯ ಜನರಿಗೆ ತಲುಪಲಿಲ್ಲ ಮತ್ತು ಆ ಸಮಯದಲ್ಲಿ ಅಷ್ಟರ ಮಟ್ಟಿಗೆ ಪ್ರತಿಕ್ರಿಯೆಯೂ ಇಲ್ಲಿ ದೊರಕಿರಲಿಲ್ಲ....😊

ಆದರೆ ಈ ತುಳುನಾಡಿನ ಸಂಸ್ಕೃತಿಯ ಜೊತೆಗೆ ಕನ್ನಡದ ಕಂಪು ಬೆರೆತು ಬೇರೊಂದು ಲೋಕವನ್ನೇ ಸೃಷ್ಟಿ ಮಾಡಿ
ಹೊರ ಪ್ರಪಂಚಕ್ಕೆ ಈ ಮಣ್ಣಿನ ಸೊಬಗನ್ನು ಪಸರಿಸಿದ ಕೀರ್ತಿ ರಿಷಭ್ ಶೆಟ್ಟಿ ಮತ್ತು ತಂಡಕ್ಕೆ ಸಲ್ಲಬೇಕು...😍👌

ಗರಡುಗಮನ ವೃಷಭ ವಾಹನ ನಂತರ ನ್ಯಾಚುರಲ್ ಆಕ್ಟಿಂಗ್ ಮತ್ತು ನ್ಯಾಚುರಲ್ ದೃಶ್ಯಗಳ ಮೂಲಕ ಈ ಸಿನಿಮಾ ನಮ್ಮ ಮುಂದೆ ಮೂಡಿ ಬಂದಿದೆ

ರಿಷಭ್ ಶೆಟ್ಟಿಯೇ ಒಂದು ಸಂದರ್ಶನದಲ್ಲಿ ಹೇಳಿದ ಮಾತು ದೈವಗಳ ಮೇಲೆ ನಂಬಿಕೆ ಇರುವವರು ಮತ್ತು ನಂಬಿಕೆ ಜೊತೆಗೆ ವಿಚಾರ ತಿಳಿಯದವರು ನಮ್ಮ ತಂಡದಲ್ಲಿ ಇದ್ದರು ಆದರೆ ಕಥೆ ತಿಳಿದು ಸಿನೆಮಾ ಮುಗಿಯುವ ಸಮಯದಲ್ಲಿ ಅವರುಗಳಿಗೆಯೇ ದೈವಗಳಿಗೆ ಮೇಲೆ ನಂಬಿಕೆ ಬಂದಿದೆ ಕೈಮುಗಿದು ಬಂದಿದ್ದಾರೆ ಎಂಬುವುದು ಇದು ಈ ಮಣ್ಣಿನ ದೈವಗಳ ಶಕ್ತಿ ಎಂಬುವುದರಲ್ಲಿ ಸಂಶಯವಿಲ್ಲ...🙏

ಕಂಬಳ, ಮನೆ ಮನೆಗೆ ಬರುವ ಯಕ್ಷಗಾನ ಮತ್ತು ಕೋಳಿ ಆಂಕದ ದೃಶ್ಯ ಗಳು ಸೊಗಸಾಗಿ ಮೂಡಿ ಬಂದಿದೆ ಟ್ರೈಲರ್ ನೋಡಿ ಕಂಬಳದ ಕಥೆಯ ಚಿತ್ರ ಆಗಿರಬಹುದು ಎಂದು ತಿಳಿದರೆ ಅದು ನಿಮ್ಮ ತಪ್ಪು ಇಲ್ಲಿ ತುಳುನಾಡಿನ ಸಂಸ್ಕೃತಿಯೂ ವಿಶೇಷ ರೀತಿಯಲ್ಲಿ ಅನಾವರಣವಾಗಿದೆ..😍

ಕಡೆಯ ಒಂದು ಮೂವತ್ತು ನಿಮಿಷದಲ್ಲಿ ಮೂಡಿ ಬಂದಿರುವ ದೃಶ್ಯ ಸಂಚಲನ ಮೂಡಿಸುತ್ತದೆ ಅದೊಂದು ಬೈಬ್ರೇಸನ್ ಮೂಡಬೇಕಾದರೆ ಅದನ್ನು ಥಿಯೇಟರ್ ಅಲ್ಲೇ ನೋಡಬೇಕು...🔥

ಉವೋಓಓಓಓಓಓ ಎಂದು ಅಬ್ಬರಿಸುವಾಗ ನಿಮ್ಮ ಮೈಯ ರೋಮಗಳು ಸೆಟೆದು ನಿಲ್ಲದಿದ್ದರೆ ಆಗ ಹೇಳಿ. ಆ ರೀತಿ ಅಭಿನಯಿಸಲು ರಿಷಬ್ ಮೇಲೆ ದೈವವೇ ಆಕರಣೆಯಾಗಿರಬೇಕು ಎಂದೆನ್ನಿಸುತ್ತದೆ. 

ಸಡನ್ ಆಗಿ ಮೂಡಿ ಬರುವ ಕೆಲವೊಂದು ಸನ್ನಿವೇಶ ಕೆಲವರಿಗೆ ಒಂದು ಕ್ಷಣ ಮೈ ರೋಮಾಂಚನ ಮೂಡಿಸುತ್ತದೆ ಮತ್ತು ಸಂಪೂರ್ಣ ಸಿನೆಮಾದಲ್ಲಿ ಸೈಲೆಂಟ್ ಆಗಿ ಇಂಪಾದ ಸಂಗೀತ ನಮ್ಮನ್ನು ಹಾಗೆ ಮೆಲ್ಲಗೆ ಸೆಳೆದು ಬಿಡುತ್ತದೆ...🎶♥️

ಇದು ನನ್ನ ಅಭಿಪ್ರಾಯ ಇನ್ನೂ ಅವರವರ ಭಾವಕ್ಕೆ ಮತ್ತು ಅವರವರ ಅಭಿರುಚಿಗೆ ಬಿಟ್ಟಿದ್ದು

ನನ್ನ ಪ್ರಕಾರ ನಿಮ್ಮನ್ನು ಈ ಸಿನಿಮಾ ಒಂದಿಷ್ಟು ಗಂಟೆಗಳ ಕಾಲ ತುಳುನಾಡಿನ ಸಂಸ್ಕೃತಿ ಮತ್ತು ಆಚಾರ ವಿಚಾರಗಳು ಗಟ್ಟಿಯಾಗಿ ನಿಮ್ಮನ್ನು ಹಿಡಿದು ಬಿಡುತ್ತದೆ...♥️

ನಮ್ಮ ಸಂಸ್ಕಾರ ಸಂಸ್ಕೃತಿಯನ್ನು ಪರಿಚಯಿಸುವ ಚಿತ್ರಗಳು ಇದೆ ರೀತಿ ಮುಂದಿನ ದಿನಗಳಲ್ಲಿ ಬಂದರು ಈ ಸಿನೆಮಾದ ರೀತಿಯಲ್ಲಿ ಯಶಸ್ವಿಯಾಗಲಿ ಎಂಬುವುದು ನನ್ನ ಆಶಯ...🚩

ಅಮೆಜಾನ್ ಪ್ರೈ ನಲ್ಲಿ ಬರೋತ್ತೇ OTT ಯಲ್ಲಿ ನೋಡಬಹುದು ಎಂದು ಕೂತರೇ ಖಂಡಿತ ಒಂದೊಳ್ಳೆ ಅನುಭವವನ್ನು ನೀವು ತಪ್ಷಿಸಿಕೊಂಡಂತೆ. ಆಧುನಿಕತೆಯ ಅಬ್ಬರಕ್ಕೆ ಧಾರ್ಮಿಕ ನಂಬಿಕೆಯನ್ನೇ ಮರೆತಿರುವ ಯುವ ಸಮುದಾಯ ಈ ಚಿತ್ರವನ್ನು ಟಾಕೀಸ್ ನಲ್ಲಿ ನೋಡಿ ಅನುಭವಿಸಿದರೆ ಚಂದ...

||ಧರ್ಮೋ ರಕ್ಷತಿ ರಕ್ಷಿತಃ|| 🕉🚩