The_Kashmir_Files

#ది_ಕಾಶ್ಮೀರ್_ಫೈಲ್ಸ್

ಈ ಮೂವಿ ಬಗ್ಗೆ ನಾನು ಏನು ಅಂತ ಹೇಳಲಿ. ನಿಜ ಹೇಳಬೇಕೆಂದರೆ ಎಷ್ಟು ಹೇಳಿದರೂ ಅದು ಇಲ್ಲಿ ಬಹಳಷ್ಟು ಕಡಿಮೆಯೇ..



ಇದು 500-1000 ವರ್ಷಗಳ ಹಿಂದೆ ನಡೆದ ಘಟನೆಯಲ್ಲ... ಇತ್ತೇಚೆಗೆ ನಡೆದಿದ್ದು...
ಆಗ ನಡೆಯುವ ವಿದ್ಯಮಾನಗಳು ಪ್ರಪಂಚಕ್ಕೆ ಗೊತ್ತಾಗುತ್ತಿತ್ತು ಆದರೂ ಅಲ್ಲಿ ನಡೆದ ಆ ಮಾರಣ ಹೋಮದ ಕಥೆ ಕಾಶ್ಮೀರದಿಂದ ಹೊರಗೆ ಬಂದಿರಲೇ ಇಲ್ಲ... ಅಲ್ಲೊಂದು ಇಲ್ಲೊಂದು ಬಂದರೂ ಅದನ್ನು ಮುಚ್ಚಿಹಾಕುವ ಯತ್ನ ವ್ಯವಸ್ಥಿತವಾಗಿ ನಡೆದಿತ್ತು.

ಹಕ್ಕಿಗಳು ವಲಸೆ ಹೋಗುವುದು ನಮಗೆಲ್ಲಾ ಗೊತ್ತೇ ಇದೆ. ಒಂದು ರಾಜ್ಯ, ಒಂದು ದೇಶ ಬಿಡಿ, ಒಂದು ಖಂಡದಿಂದ ಇನ್ನೊಂದು ಖಂಡಕ್ಕೆ ಸಾವಿರಾರು ಕಿಲೋಮೀಟರ್ ದೂರ ಹಾರಿ ಹೋಗುವ ಹಕ್ಕಿಗಳು ಕೂಡ ಇವೆ. ಅಷ್ಟು ಮಾತ್ರವಲ್ಲ ಮತ್ತೆ ತಮ್ಮ ತಮ್ಮ ನೆಲೆಗಳಿಗೆ ಆ ಹಕ್ಕಿಗಳು ಮರಳುವುದನ್ನು ನಾವು ಕೇಳಿದ್ದೇವೆ. ಆದರೆ ಈ ಕಶ್ಮೀರಿ ಪಂಡಿತರ ಕಥೆ ಇದೆಯಲ್ಲಾ ಇದರಲ್ಲಿ ಇಂತಹದ್ದು ಯಾವುದೂ ನಡೆಯುವುದೇ ಇಲ್ಲ. ನಮಗೆಲ್ಲರಿಗೂ ಕಶ್ಮೀರಿ ಪಂಡಿತರು ವಲಸೆ ಹೋದರು, ವಲಸೆ ಹೋದರು ಎಂಬ ಕಥೆಯನ್ನೇ ಎಲ್ಲರೂ ಹೇಳಿದ್ದೇ ಹೇಳಿದ್ದು. ಲಕ್ಷಾಂತರ ಸಂಖ್ಯೆಯಲ್ಲಿ ಜನರು ತಮ್ಮ ತಮ್ಮ ಮನೆ ಮಠ ಜಾಗ ಎಲ್ಲವನ್ನೂ ತೊರೆದು ಇದ್ದಕ್ಕಿದ್ದಂತೆ ಹೋದದ್ದಾದರೂ ಏಕೆ? ಯಾರಾದರೂ ಏಕೆ ಹೋಗುತ್ತಾರೆ? ಬರೀ ಆ ಕಶ್ಮೀರಿ ಪಂಡಿತರೇಕೆ ಸ್ವತಃ ನಮಗೆ ನಮ್ಮ ಮನೆಯನ್ನು ಬಿಟ್ಟು ದೇಶದ ಇನ್ನೊಂದು ಮೂಲೆಗೆ ನಡೀರಿ ಎಂದು ಯಾರಾದರೂ ಹೇಳಿಬಿಟ್ಟರೆ ನಾವು ಹೋಗಲು ತಯಾರಿದ್ದೇವೆಯೇ?

ವಲಸೆ ಎಂಬ ಕಟ್ಟುಕಥೆಯಲ್ಲಿ ದೇಶದಲ್ಲಿ ಭೀಕರವಾಗಿ ನಡೆದ, ಸರಿಯಾಗಿ ಎಷ್ಟು ಜನ ಸತ್ತರು ಎಂಬ ಲೆಕ್ಕವನ್ನೇ ಹಾಕದ ಹಿಂದೂ ನರಮೇಧವೊಂದು ವ್ಯವಸ್ಥಿತವಾಗಿಯೇ ಈ ದೇಶದ ತುತ್ತತುದಿಯಲ್ಲಿ ನಡೆದು ಹಾಗೇ ತೆರೆಮರೆಗೆ ಸರಿದಿತ್ತು! ಅದರ ಅಸಲಿ ಕಥೆಯೇ ಈ ಕಶ್ಮೀರಿ ಫೈಲ್ಸ್ 

Steven Spielberg ನ Schindler's List ನಂತಹ ಟಾಪ್ ರೇಟೆಡ್ ಮೂವಿಯನ್ನು ಜಗತ್ತಿನೆಲ್ಲೆಡೆಯೂ ಇಂದಿಗೂ ನೋಡುತ್ತಾರೆ, ಎಲ್ಲರೂ ಇನ್ನಿಲ್ಲದಂತೆ ಮರುಗುತ್ತಾರೆ, ಭಾರತೀಯರ ಹೃದಯಗಳು ಕೂಡ ಮಿಡಿಯುತ್ತವೆ. ಏಕೆ? ಏಕೆಂದರೆ ಅದು ಹಿಟ್ಲರ್ ಎಂಬ ನರಹಂತಕ ಆಗಿನ ಯಹೂದಿಗಳ ಮೇಲೆ ನಡೆಸಿದ ಅತೀ ಘೋರವಾದ ನರಮೇಧದ ಕಥೆ. ಅದರಲ್ಲಿನ ನರಮೇಧಕ್ಕಾಗಿ, ಸ್ವತಃ ನಾಝಿ ಪಾರ್ಟಿಯ ಸದಸ್ಯ ಆಗಿದ್ದರೂ ಶಿಂಡ್ಲರ್ ಅಂತಹ ಸಂಧರ್ಭದಲ್ಲಿಯೂ ಮಾಡಿದ ಒಂದಿಷ್ಟು ಜನರ ಪ್ರಾಣ ರಕ್ಷಣೆಗಾಗಿ ಇಂದಿಗೂ ಅದನ್ನು ಜನರು ನೆನಪಿಸಿಕೊಳ್ಳುತ್ತಾರೆ.ಆ ಮೂವಿ ನೋಡುವಾಗ ಯಾರೂ ಅಲ್ಲಿನವರ ಧರ್ಮ ನೋಡಲಿಲ್ಲ. ನಡೆದಂತಹ ಮನಕಲುಕುವಂತಹ ನರಮೇಧ ಒಂದೇ ಮುಖ್ಯವಾಗಿತ್ತು. ಆದರೆ ಇದೇ ನಮ್ಮ ದೇಶದಲ್ಲಿ ನಮ್ಮವರೇ ಆದ ಹಿಂದುಗಳು ಅದಕ್ಕಿಂತಲೂ ಕ್ರೂರವಾಗಿ ಈ ಮುಸ್ಲಿಂ ಭಯೋತ್ಪಾದಕರ ಬಂದೂಕಿನಿಂದ, ಸೂಫಿಗಳ ತಲ್ವಾರ್ ನಿಂದ ಹತರಾದಾಗ ಈ ದೇಶದ ಜೀವಪರ ಧ್ವನಿ,ಮಾನವಪರ ಧ್ವನಿ ಎಂದಿಗೂ ಏಕೆ ಮಾತಾಡಲಿಲ್ಲ? ನರಮೇಧ ಎಂದಿಗೂ ನರಮೇಧವೇ ಅಲ್ಲವೇ..!! ಅದಕ್ಕಾಗಿಯೇ ನೀವು ನೋಡಬೇಕು ಈ ಕಶ್ಮೀರಿ ಫೈಲ್ಸ್. 

ನಮ್ಮದೇ ದೇಶದಲ್ಲಿಯೇ ಇದ್ದುಕೊಂಡು "ಭಾರತ್ ಮಾತಾ ಕೀ ಜೈ.." ಅನ್ನುವುದನ್ನು ಸಹ ಬಹಳ ಮೆತ್ತಗೆ ಹೇಳುವ, ಜೋರಾಗಿ ಹೇಳಿದರೆ ಪ್ರಾಣವೇ ಹೋದಿತು ಎಂಬ ದೃಶ್ಯವೊಂದನ್ನು ತೆರೆ ಮೇಲೆ ಬಂದಾಗ ಹಾಗೇ ಚಾಕುವಿನಿಂದ ನೇರವಾಗಿ ಹೃದಯಕ್ಕೆ ಚುಚ್ಚಿದಂತಾಗುತ್ತದೆ. ಶಾಲೆಗೆ ಹೋಗುವಾಗ ತೋಡಿದ ದೊಡ್ಡ ಗುಂಡಿಯಲ್ಲಿ ದಿನ ನಿತ್ಯವೂ ನಡೆದಾಡುತ್ತ, ಆಟವಾಡುತ್ತಾ ಹೋಗುವ ಬಾಲಕ ಶಿವ ಮುಂದೆ ಅದೇ ಗುಂಡಿಯಲ್ಲಿ ಮಣ್ಣಾಗುವುದು, ಮರದ ಮಿಲ್ಲಿನ ಗರಗಸವನ್ನು ನೋಡುತ್ತಾ ಸಾಗುತ್ತಿದ್ದ ಆ ತಾಯಿ ಶಾರದ ಮುಂದೊಂದು ದಿನ ಮುಸ್ಲಿಂ ಜಿಹಾದಿಗಳಿಂದಾಗಿ ಬಟ್ಟೆ ಹರಿದುಕೊಂಡು ಅದೇ ಗರಗಸದಿಂದಾಗಿ ಇಬ್ಬಾಗುವ ದೃಶ್ಯಗಳನ್ನು ನೋಡಲು ತುಂಬಾ ಅಂದರೆ ತುಂಬಾ ಕಷ್ಟವಾಗುತ್ತದೆ! ಆದರೂ ನೀವು ಇದನ್ನೆಲ್ಲಾ ನೋಡಲೇಬೇಕು, ಇಲ್ಲದಿದ್ದರೆ ಜಿಹಾದಿಗಳು ಮಾಡಿದ ಭೀಕರತೆ ನಮಗೆ ಅರ್ಥ ಆಗುವುದೇ ಇಲ್ಲ. ಏಕೆಂದರೆ ಈ ಹಿಂದೆ ಜಿಹಾದಿಗಳನ್ನು ಈ ರೀತಿ ತೋರಿಸಿಯೇ ಇಲ್ಲ. ಬರೀ ಅವರೊಳಗೆ ಎಂದಿಗೂ ಇಲ್ಲದ ಮಾನವೀಯತೆಯನ್ನು ತೋರಿಸುವ ಪ್ರಯತ್ನಗಳೇ ನಡೆದಿದೆ. ಅದಕ್ಕಾಗಿಯೇ ನೋಡಿ ಈ ಕಶ್ಮೀರಿ ಫೈಲ್ಸ್. 

ಪುಷ್ಪಕರ್ನಾಥ್ ಪಂಡಿತ್ ಶಿವನಿಗೆ ಹೇಳುವ "ಶಾರದೆ ಬರೀ ನಿನಗೆ ಮಾತ್ರ ತಾಯಿಯಲ್ಲ, ನಮ್ಮೆಲ್ಲರ ಮಾತೆ ಅವಳು, ಮತ್ತು ನಾವೆಲ್ಲರೂ ಸದಾ ಅವಳ ಮಕ್ಕಳು... " ಎಂಬ ಮಾತು ಹಾಗೇ ಹೃದಯವನ್ನು ತಟ್ಟಿಬಿಡುತ್ತದೆ. 

ಯಾವುದೇ ಹಾಡುಗಳ ಬಗ್ಗೆ ದ್ವೇಷ ಹೆಚ್ಚಾಗಿ ಯಾರಿಗೂ ಬರುವುದಿಲ್ಲ. ಆದರೆ ಇದರಲ್ಲಿ ಒಂದು ಹಾಡಿದೆ,"ಹಮ್ ದೇಖೆಂಗೇ.." ಅಂತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬೇರೆಯೇ ವರ್ಷನ್ ನಲ್ಲಿ ಬೇರೆಯೇ ಗುಂಗಿನಲ್ಲಿ ಹಾಡುವ ಹಾಡಿದು. ಸತ್ಯ ಹೇಳುತ್ತೇನೆ ನನ್ನ ಜನ್ಮದಲ್ಲಿಯೇ ಈ ಹಾಡನ್ನು ನಾನು ಇನ್ನೆಂದೂ ಕೇಳಲಾರೆ. ಯಾರಾದರೂ ಈ ಹಾಡನ್ನು ಇಷ್ಟ ಪಟ್ಟು ಆ ವಿದ್ಯಾರ್ಥಿಗಳಂತೆಯೇ ಗುನುಗಿದರೆ ನನಗಂತು ಅವರುಗಳ ಮೇಲೆ ಅಸಹ್ಯವೇ ಬರುತ್ತದೆ, ಏಕೆಂದರೆ ಈ ಮೂವಿಯಲ್ಲಿ ಈ ಹಾಡಿನ ಸ್ಥಾನ ಮನಸ್ಸಿಗೆ ನಿಜಕ್ಕೂ ಹಿತ ತರುವುದಿಲ್ಲ! 

" ಹಮ್ ಲೆಕೆ ರಹೆಂಗೆ ಆಜಾದಿ,ತುಮ್ ಕುಚ್ ಬಿ ಕರ್ ಲೋ, ಹಮ್ ಲೆಕೆ ರಹೆಂಗೆ ಆಜಾದಿ,ಹಮ್ ಚೀನ್ ಕೆ ಲೇಂಗೆ ಆಜಾದಿ, ಹಮ್ ಕಹಾ ಕೆ ಲೇಂಗೆ ಆಜಾದಿ.." ಎಂದು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ರಾಗವಾಗಿ ದೇಶದ ವಿರುದ್ಧವಾಗಿ, ದೇಶದ ಸೈನಿಕರ ವಿರುದ್ಧವಾಗಿ ಮೊಳಗಿಸುವ ಈ ಆಜಾದಿ ಸ್ಲೋಗನ್ ಅಂತು ಕೇಳುವಾಗ ಒಮ್ಮೆ ರಕ್ತ ಕುದಿಯದೇ ಇರದು. 

"ಒಂದೋ ಮತಾಂತರ ಆಗಿ,ಇಲ್ಲವೇ ಇಲ್ಲಿಂದ ನಡೆಯಿರಿ ಇಲ್ಲವೇ ಸತ್ತು ಹೋಗಿಬಿಡಿ " ಎಂಬ ಘೋಷಣೆ ಎಷ್ಟು ಭಯಾನಕವೋ ಅಷ್ಟೇ ಕಿರಾತಕವಾದದ್ದು" ಹೋಗುವಾಗ ನಿಮ್ಮ ಹೆಣ್ಣು ಮಕ್ಕಳನ್ನು,ನಿಮ್ಮ ಅಕ್ಕ ತಂಗಿಯಂದಿರನ್ನು,ನಿಮ್ಮ ಹೆಂಡತಿಯರನ್ನು, ನಿಮ್ಮ ತಾಯಂದಿರನ್ನು ಸಹ ಬಿಟ್ಟು ಹೋಗಿ.." ಎಂಬ ಆದೇಶ! ಅಬ್ಬಬ್ಬಾ ಎಂತಹ ಪರಮ ಕಾಮಾಂಧ ಅತ್ಯಾಚಾರಿಗಳು ಇವರು!! ಇದನ್ನೆಲ್ಲಾ ನೋಡಿ ಅರ್ಥ ಮಾಡಿಕೊಳ್ಳಬೇಕಾದರೆ ನೀವು ನೋಡಲೇಬೇಕು ಈ ಕಶ್ಮೀರಿ ಫೈಲ್ಸ್. 

ಖಂಡಿತಾ ಇದು ಬರೀ ಮೂವಿ ಅಲ್ಲ.ಇದೊಂದು ಎಕ್ಸ್ಪೀರಿಯನ್ಸ್ ಜೊತೆಗೆ ನಮ್ಮಿಂದ ಬಹಳ ಕಾಲ ವ್ಯವಸ್ಥಿತವಾಗಿ ಮುಚ್ಚಿಟ್ಟ ಹಿಂದುಗಳ ನರಮೇಧದ ಕಥೆ ಇದು.ಇದಕ್ಕೆ ನೇರಾ ಕಾರಣ ಇದನ್ನು ತಡೆಯದೆ ಇದ್ದ ಆ ಸಂಧರ್ಭದಲ್ಲಿ ಇದ್ದ ರಾಜ್ಯ ಹಾಗೂ ಕೇಂದ್ರ ಸರಕಾರಗಳು, ಕಶ್ಮೀರದ ಮುಸ್ಲಿಂ ಭಯೋತ್ಪಾದಕರು, ಕರೆಪ್ಟೆಡ್ ಮಾಧ್ಯಮಗಳು, ಪೊಳ್ಳು ಇತಿಹಾಸಕಾರರು,ಕಮ್ಮಿ ನಿಷ್ಠೆಯ ಸಾಹಿತಿಗಳು,ಬುದ್ಧಿಜೀವಿಗಳು,ಅದರ ಜೊತೆಗೆ ನಮ್ಮ ನಿಮ್ಮ ನಡುವೆ ಇದ್ದ ಈಗಲೂ ಇರುವ ಹಿಂದೂ ಜಾತ್ಯಾತೀತವಾದಿಗಳು! ಎಲ್ಲಕ್ಕಿಂತ ತುಂಬಾ ಅಪಾಯಕಾರಿ ಈ ಕೊನೆಯವರೇ.

ಹಿಂದೂಗಳಿಗೆ ಪ್ರತೀ ಬಾರಿಯೂ "ನೀನು ಜಾತ್ಯತೀತನಾಗು, ಸಹಿಷ್ಣುವಾಗು.." ಎಂಬ ಬೊಗಳೆ ಪಾಠ ಹೇಳುವ ಇಂತಹವರಿಂದಾಗಿಯೇ ಈ ದೇಶದಲ್ಲಿ ಬಹುಸಂಖ್ಯಾತ ಹಿಂದೂಗಳು ಇಂದಿಗೂ ಅಲ್ಪಸಂಖ್ಯಾತರ ರೀತಿಯಲ್ಲಿ ಬದುಕು ಸಾಗಿಸುತ್ತಿರುವುದು. ಒಬ್ಬ ಹಿಂದೂವಾಗಿ ಹುಟ್ಟಿದ ಮೇಲೆ ಅವನಿಗೆ ಈ ಜಾತ್ಯತೀತೆಯ ಪಾಠ, ಸಹಿಷ್ಣುತೆಯ ಸಲಹೆಗಳನ್ನು ಯಾರಿಂದಲೂ ಕೇಳಿಸಿಕೊಳ್ಳಬೇಕಾದ ಅನಿವಾರ್ಯತೆಯೇ ಇಲ್ಲ. ಏಕೆಂದರೆ ಒಬ್ಬ ಹಿಂದೂವಾಗಿ ಹುಟ್ಟಿದ್ದಾನೆ ಎಂದರೆ ಅವನು ಅಲ್ಲಿಂದಲೇ ಜಾತ್ಯತೀತ ಹಾಗೂ ಪರಮ ಸಹಿಷ್ಣುವಾಗಿ ಬಿಡುತ್ತಾನೆ. ಯಾರಾದರೂ ಹಿಂದೂಗಳು ನಾವು ಜಾತ್ಯತೀತ ಹಿಂದೂಗಳು, ನಾವು ಜಾತ್ಯತೀತ ಹಿಂದೂಗಳು ಎಂದು ಹೇಳುತ್ತಾ ಎಲ್ಲೆಡೆ ತಿರುಗುತ್ತಿದ್ದರೆ ನಿಜಕ್ಕೂ ಸಿಕ್ಕಾಪಟ್ಟೆ ಕನಿಕರ ಹುಟ್ಟುತ್ತದೆ ಜೊತೆಗೆ ಅವರೆಡೆಗೊಂದು ಅಸಹ್ಯವೂ ಬರುತ್ತದೆ! ಇದನ್ನು ಏಕೆ ಹೇಳಿದೆ ಎಂದರೆ ಈ ಎಲ್ಲಾ ಜಿಜ್ಞಾಸೆಗಳಿಗೆ ಉತ್ತರ ಮತ್ತು ಹಿಂದೂಗಳು ಅದೆಷ್ಟು ಜಾತ್ಯಾತೀತರು ಹಾಗೂ ಸಹಿಷ್ಣುಗಳಾಗಿದ್ದರು ಎನ್ನುವುದಕ್ಕೆ ಸ್ಪಷ್ಟ ಉದಾಹರಣೆಗಳು ಈ ಮೂವಿಯಲ್ಲಿಯೇ ಹೃದಯಕ್ಕೆ ನಾಟುವಂತೆ ಇದೆ. ಅರಗಿಸಿಕೊಳ್ಳಲು ಸ್ವಲ್ಪ ಕಷ್ಟವೇ. ಅದಕ್ಕಾಗಿಯೇ ಹೇಳಿದ್ದು,ಇದೆಲ್ಲಾ ಅರ್ಥವಾಗಬೇಕಾದರೆ ನೀವು ನೋಡಲೇಬೇಕು ಈ ಕಶ್ಮೀರಿ ಫೈಲ್ಸ್. 

ಬಾಲಿವುಡ್ ನ ಬಡೇ ಖಾನ್ ಗಳು, ಅಲ್ಲಿಯ ದೊಡ್ಡ ಮಂಡೆಗಳು ಈ ಮೂವಿಯನ್ನು ಬೆಂಬಲಿಸದೇ ಇದ್ದರೂ ಜನರು ಅದಾಗಲೇ ಇದನ್ನು ಹೃದಯಲ್ಲಿಟ್ಟು ಮೆರೆಸಿ ಆಗಿದೆ. ಇದು ಇನ್ನೂ ಗೆಲ್ಲುತ್ತದೆ, ಗೆಲ್ಲಬೇಕು ಕೂಡ, ಅಷ್ಟು ಮಾತ್ರವಲ್ಲ ಇದು ಜಗತ್ತಿನಾದ್ಯಂತ ಪ್ರದರ್ಶನ ಕಂಡು ಕಶ್ಮೀರದ ನಮ್ಮ ಶಾಂತಿಪ್ರೀಯ ಭಾಂಧವರ ಬಗ್ಗೆ ಅವರಿಗೂ ಸರಿಯಾಗಿಯೇ ತಿಳಿಯಬೇಕು! 

ಸದ್ಯಕ್ಕೆ ಎಲ್ಲಾ ರೀತಿಯಿಂದಲೂ ಗೆದ್ದಿರುವ ಈ ಚಿತ್ರವನ್ನು ಮುಂದಿನ ಫಿಲ್ಮ್ ಫೇರ್ ಆವಾರ್ಡ್ ಫಂಕ್ಷನ್ ಗಳಲ್ಲಿ ಬಾಲಿವುಡ್ ಚಿಂತಕರು ಯಾವ ರೀತಿ ಟ್ರೀಟ್ ಮಾಡುತ್ತಾರೆ ಎಂದು ನೋಡುವ ಕುತೂಹಲ ನನಗಂತು ಸಿಕ್ಕಾಪಟ್ಟೆ ಇದೆ!! 

ಇದರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಏಕೆಂದರೆ ಇಂತಹದ್ದೊಂದು ಸಾಹಸ ಮಾಡುವವರೇ ನಮ್ಮ ಚಿತ್ರರಂಗದಲ್ಲಿ ಇರಲಿಲ್ಲ.ಈ ಚಿತ್ರ ಒಂದೇ ಮುಂದೆ ಹಲವಾರು ನಿರ್ದೇಶಕರಿಗೆ ಇಂತಹದ್ದೇ ಹಲವಾರು ಚಿತ್ರ ಮಾಡಲು ಪ್ರೇರಣೆ ಆದರೂ ಆಗಬಹುದು. ಖಂಡಿತವಾಗಿಯೂ ಇನ್ನಷ್ಟು ಸತ್ಯ ಕಥೆಗಳು ಹೊರಬರಲೇ ಬೇಕು. ಇಂತಹದ್ದೊಂದು ಮೂವಿ ನೀಡಿದಕ್ಕಾಗಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹಾಗೂ ಇದರ ಎಲ್ಲಾ ನಟರನ್ನು ಈ ದೇಶ ಬಹಳಷ್ಟು ಕಾಲ ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ. 

ಮಿಥುನ್ ಚಕ್ರವರ್ತಿ,ಅನುಪಮ್ ಖೇರ್, ದರ್ಶನ್ ಕುಮಾರ್, ಪಲ್ಲವಿ ಜೋಶಿ,ಚಿನ್ಮಯ್ ಮಂಡ್ಲೇಕರ್,ಪ್ರಕಾಶ್ ಬೆಳವಾಡಿ ಹಾಗೂ ಪುನೀತ್ ಇಸ್ಸಾರ್ ಇದರಲ್ಲಿ ಅಭಿನಯಿಸಿದ್ದಾರೆ. ಅದರಲ್ಲೂ ಅನುಪಮ್ ಖೇರ್ ಅಳುತ್ತಲೇ ನೋಡುಗನನ್ನು ಸಹ ಇನ್ನಿಲ್ಲದಂತೆ ಅಳಿಸಿ ಬಿಟ್ಟರೆ, ಮಿಥುನ್ ಚಕ್ರವರ್ತಿ ತೀರಾ ಅಸಹಾಯಕನಾಗಿ ವ್ಯವಸ್ಥೆಯ ಕೈಗನ್ನಡಿಯಾಗಿ ಗೋಚರಿಸುತ್ತಾರೆ. ಕೊನೆಯಲ್ಲಿ ಮಾತ್ರ ದರ್ಶನ್ ಕುಮಾರ್ ತನ್ನ ನಟನೆಯಿಂದಲೇ ಎಲ್ಲರ ಚಳಿ ಬಿಡಿಸುತ್ತಾನೆ. ಉಗ್ರ ಫಾರೂಖ್ ಮಲ್ಲಿಕ್ ಬಿಟ್ಟ ಆಗಿ ಅಭಿನಯಿಸಿದ ಚಿನ್ಮಯ್ ಮಂಡ್ಲೇಕರ್ ಇಲ್ಲಿ ಅರ್ಧ ಕಣ್ಣು ಮುಚ್ಚಿ ತೆರೆದು, ಮುಚ್ಚಿ ತೆರೆದು ಹಾಗೇ ನೋಡುಗನ ಬೆವರಿಳಿಸಿ ಬಿಡುತ್ತಾನೆ.ಅನುಪಮ್ ಖೇರ್ ಹಾಗೂ ಮಿಥುನ್ ಚಕ್ರವರ್ತಿಯದ್ದು ನಿಜಕ್ಕೂ ಅದ್ಭುತ ನಟನೆ. ಇದು ಅವರ ಜೀವಮಾನದ ನಟನೆ ಅಂದರೂ ತಪ್ಪಾಗದು.

ನಿರಾಶ್ರೀತರ ಟೆಂಟಿನಲ್ಲಿ ಹೊಟ್ಟೆ ಹಸಿದುಕೊಂಡಿದ್ದರೂ ಸಹ ತನ್ನ ಮೊಮ್ಮಕ್ಕಳು ಚೆನ್ನಾಗಿ ಊಟ ಮಾಡಲಿ ಎಂದು ಪಾರ್ಲೆಜಿ ಬಿಸ್ಕೆಟ್ ಅನ್ನು ನಿತ್ಯವೂ ಚೀಪಿ ಚೀಪಿ ಮತ್ತೆ ಆ ಬಿಸ್ಕೆಟ್ ಅನ್ನು ಯಥಾಪ್ರಕಾರ ಡಬ್ಬದಲ್ಲಿಟ್ಟು ಹೊಟ್ಟೆ ಹಸಿವು ತಣಿಸಿಕೊಳ್ಳುವ ಪುಷ್ಕರ್ನಾಥ್ ಪಂಡಿತ್(ಅನುಪಮ್ ಖೇರ್) ಹಾಗೂ ಜಿಹಾದಿಗಳಿಂದ ಧ್ವಂಸವಾಗಿ ಕೆಳಗೆ ಬಿದ್ದಿರುವ ಶಿವಲಿಂಗವನ್ನು ಮಗುವಂತೆ ಎತ್ತಿಕೊಂಡು ತನ್ನ ಉಟ್ಟ ಬಟ್ಟೆಯಲ್ಲಿಯೇ ಒರೆಸುವ ಬ್ರಹ್ಮದತ್ತ್(ಮಿಥುನ್ ಚಕ್ರವರ್ತಿ) ಇನ್ನಿಲ್ಲದಂತೆ ನಮ್ಮನ್ನು ಕಾಡಿ ಬಿಡುತ್ತಾರೆ ಇಲ್ಲಿ. 

ಮೂವಿಯಲ್ಲಿ ಇನ್ನೂ ಒಂದು ದೃಶ್ಯವಿದೆ. ಕಾಶ್ಮೀರದ ಆ ತಣ್ಣನೆಯ ಸರೋವರದ ನಡುವಲ್ಲಿ ದೋಣಿಯಲ್ಲಿ ಹೋಗುವಾಗ ಸತ್ಯ ತಿಳಿದುಕೊಳ್ಳಲು ಬಂದಿರುವ ಕೃಷ್ಣನಿಗೆ ಅಬ್ದುಲ್ಲಾ ಬಹಳ ಸುಭಗನಂತೆ ನಟಿಸುತ್ತಾ ಈ ರೀತಿ ಹೇಳುತ್ತಾನೆ "ಎಲ್ಲರೂ ನಮ್ಮ ಬಗ್ಗೆ ಬರೀ ಸುಳ್ಳನ್ನೇ ಹೇಳುತ್ತಾರೆ ಕೃಷ್ಣ. ಆದರೆ ನಿಜ ಬೇರೆಯೇ ಇದೆ. ನಾವು ನಿಜವಾಗಿಯೂ ಅಮಾಯಕರು, ನಾವು ಯಾವುದೇ ಕಶ್ಮೀರಿ ಪಂಡಿತರ ಕೊಲೆಯನ್ನೂ ಮಾಡಿಲ್ಲ. ನೀನೇ ನೋಡು ನನ್ನನ್ನು ನೋಡುವಾಗ ನಾನೊಬ್ಬ ಉಗ್ರಗಾಮಿ ತರಹ ಕಾಣುತ್ತೇನಾ? ಅತ್ಯಚಾರಿಯಾಗಿ ಕಾಣುತ್ತೇನಾ? ಬೇಕಿದ್ದರೆ ಈ ಪುಟ್ಟ ಬಾಲಕನನ್ನೇ ನೋಡು, ನಿಜವಾಗಿಯೂ ಈ ಮಗು ನಿನ್ನ ಕಣ್ಣಿಗೆ ಉಗ್ರಗಾಮಿಯಂತೆ ಗೋಚರಿಸುತ್ತಾನಾ?..". ದಯವಿಟ್ಟು ಕ್ಷಮಿಸಿ ದೇವಾರಣೆಯಾಗಿಯೂ ಹೇಳುತ್ತೇನೆ ಆ ಪುಟ್ಟ ಬಾಲಕನಲ್ಲೂ ನನಗೆ ಕಂಡಿದ್ದು ಒಬ್ಬ ಭವಿಷ್ಯದ ಉಗ್ರಗಾಮಿ ಹಾಗೂ ಅತ್ಯಾಚಾರಿಯೇ!!. ನನಗೆ ಮಾತ್ರವಲ್ಲ ನೋಡುವ ನಿಮಗೂ ಹಾಗೇ ಅನ್ನಿಸುವುದು. ಏಕೆಂದರೆ ಇಂತಹ ಹಲವು ಮಕ್ಕಳ ಮನಸ್ಥಿತಿಯನ್ನು ಅದಾಗಲೇ ಈ ಮೂವಿಯ ಆರಂಭದಲ್ಲಿಯೇ ನಮಗೆ ಬಹಳ ಸ್ಪಷ್ಟವಾಗಿ ತೋರಿಸಿದ್ದಾರೆ. ಖಂಡಿತವಾಗಿಯೂ ಅವರೆಡೆಗೆ ಇಂತಹದ್ದೊಂದು ಮನಸ್ಥಿತಿ ನಮ್ಮಲ್ಲಿಯೂ ಮೊಳಕೆಯೊಡೆದರೆ ಅದರಲ್ಲಿ ನಮ್ಮ ನಿಮ್ಮ ಯಾವುದೇ ತಪ್ಪೂ ಇಲ್ಲ. ಏಕೆಂದರೆ ಆ ಜಿಹಾದಿಗಳನ್ನು, ಅವರಂತೆಯೇ ಇದ್ದ ಅವರ ಸಂತತಿಯನ್ನು,ಈ ಒಂದು ಮೂವಿ ಹೇಳುವ ಆ ಕಟು ಸತ್ಯಗಳನ್ನು ನಾವು ಈ ಒಂದು ಜನ್ಮದಲ್ಲಿ ಅಂತು ಸುಲಭಕ್ಕೆ ಜೀರ್ಣಿಸಿಕೊಳ್ಳಲು ಸಾಧ್ಯವೇ ಇಲ್ಲ!

ಈ ಮೂವಿಯನ್ನು ನೋಡಿ, ದಯವಿಟ್ಟು ಇದನ್ನು ಆದಷ್ಟು ಥಿಯೇಟರ್ ನಲ್ಲಿಯೇ ನೋಡಿ. ಒಂದು ಮೂವಿಗಾಗಿ ಅಷ್ಟೊಂದು ಜನರು ಒಟ್ಟಿಗೆ ಮೌನವಾಗುವುದು, ಥಿಯೇಟರ್ ನ ಸೂರು ಕಿತ್ತು ಹೋಗುವಂತೆ ಭೋಲೋ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುವುದು, ಇನ್ನಿಲ್ಲದಂತೆ ಕಣ್ಣೀರು ಸುರಿಸುವುದು, ಮಾತಾಡಿಸಿ ಬಿಟ್ಟರೆ ಕಣ್ಣಲ್ಲಿ ನೀರು ತುಂಬಿಕೊಂಡೇ ಸಿಕ್ಕಾಪಟ್ಟೆ ಆಕ್ರೋಶಿತರಾಗುವುದು, ಇದೆಲ್ಲ ಸಾಮಾನ್ಯದ ಮಾತೇ, ಖಂಡಿತಾ ಅಲ್ಲ!

ಇದು ಹಕ್ಕಿಗಳಂತೆ ಪುರ್ರೆಂದು ವಲಸೆ ಹೋದ ಪಂಡಿತರದ್ದೊಂದು ಸಾಮಾನ್ಯ ವಲಸೆಯ ಕಥೆಯಲ್ಲ, ಇದು ನಮ್ಮ ನಿಮ್ಮಂತೆಯೇ ಈ ದೇಶದಲ್ಲಿಯೇ ಹುಟ್ಟಿದ ನಮ್ಮ ಹಿಂದೂಗಳದ್ದೇ ನರಮೇಧದ ಕಥೆ..! 
ನೋಡಿ...
#The_Kashmir_Files

||ಧರ್ಮೋ ರಕ್ಷತಿ ರಕ್ಷಿತಃ|| 🕉🚩