ಕಾರ್ಗಿಲ್ ಕದನ ಕಲಿಗಳ ಸ್ಮರಣೆಯ ದಿನ🇮🇳...

ಕಾರ್ಗಿಲ್ ಕದನ ಕಲಿಗಳ ಸ್ಮರಣೆಯ ದಿನ





ವೀರ ಸೈನಿಕರ ತ್ಯಾಗ ಬಲಿದಾನದ ಫಲಪ್ರದವಾಗಿ 1999 ರ ಕಾರ್ಗಿಲ್ ಯುದ್ಧ ಜಯಸಿ,
ಜಗತ್ತಿಗೆ ಒಂದು ಉತ್ತರ ಕೊಟ್ಟ ದಿನ...
ನಮ್ಮ ಸ್ವಾಭಿಮಾನ ಧಕ್ಕೆ ಬಂದರೆ ಯಾರನ್ನು ಸುಮ್ಮನೆ ಬಿಡಲ್ಲ ಅಂತ
ಸೂಕ್ಷ್ಮವಾಗಿ ಆಗಿನ ಜಗತ್ತಿನ ಬಲಿಷ್ಠ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ ಯುದ್ಧವದು...
ಹೌದು ಕೆಲವು ಸಲ ಈ ಮನಸ್ಸು ಕೆಟ್ಟದ್ದು ಬಯಸುತ್ತೆ, ಯುದ್ಧ ಎನ್ನುವುದು ರಕ್ತಸಿಕ್ತ ಚರಿತ್ರೆ... ಆದರೆ ಒಂದು ದೇಶದ ವಾಸಿಗಳಿಗೆ ರಾಷ್ಟ್ರ ಭಕ್ತಿ ಮತ್ತು ದೇಶಪ್ರೇಮ ಅನಾವರಣಗೊಳ್ಳಬೇಕಾದರೆ ಆಗಾಗ ಯುದ್ಧ ಮಾಡಬೇಕು ಅನ್ನಿಸುತ್ತೆ...
ಇದು ಸರಿ ಅಲ್ಲ...
ನಾವು ನೋಡಿದ್ದೇವೆ ಕಾರ್ಗಿಲ್ ಯುದ್ಧ ನಮಗೆ ಕೇವಲ ಮದ್ದು ಗುಂಡುಗಳು, ಸಮಯ ಅಷ್ಟೇ ಖರ್ಚು ಆಗಲಿಲ್ಲ..
ಎಲ್ಲದಕ್ಕಿಂತಲೂ ಮಿಗಲಾಗಿ ಪ್ರಾಣಗಳ ಅರ್ಪಣೆ
ತ್ಯಾಗ ಅಸಂಖ್ಯ ಯೋಧರ ದೇಹದ ಊನ ಅಂಗವೈಕಲ್ಯ,
ಹತ್ತು ವರ್ಷ ದೇಶದ ಅಭಿವೃದ್ಧಿ ಹಿಮ್ಮುಖವಾಗಿದ್ದು ಈ ಮುಖದಿಂದ ಯೋಚಿಸಿದರೇ ಯುದ್ಧ ಬೇಡವೇ ಬೇಡ ಅನ್ನಿಸಿಸುತ್ತೆ...
ಈ ಪ್ರಕೃತಿಯ ಮೂಲ ಗುಣವೇ ಹೀಗದೆ ಬಲಿಷ್ಠವಾದದ್ದು ಉಳಿಯುತ್ತೆ ,ಬಲಹೀನತೆ ಅಳಿಯುತ್ತೆ, ಉಳಿಯಬೇಕಾದರೆ ಹೋರಾಡಲೇ ಬೇಕು ಜೀವನಕ್ಕಾದರೂ ಸರಿ ದೇಶಕ್ಕಾದರೂ ಸರಿ
ಈ ತಥ್ಯದಿಂದ ಯೋಚಿಸಿದರೆ ಯುದ್ಧ ಬೇಕು..
ಒಟ್ಟಾರೆ ಒಂದು ದೇಶವಾಗಿ ಉಳಿಯಬೇಕಾದರೆ ದೇಶ ಭಕ್ತಿ ರಾಷ್ಟ್ರಪ್ರೇಮ ನಮ್ಮ ಅಂತಹಸತ್ವವಾದ ಶ್ರೇಷ್ಠ ಪರಂಪರೆ ಸಂಸ್ಕೃತಿ ಉಳಿಬೇಕು ಬೆಳೆಯಬೇಕು
ಅದರ ಮಹತ್ವ ತಿಳಿಯಬೇಕಾದರೆ ಆಗಾಗ ಯುದ್ಧ ಆಗಬೇಕು
ಅದಕ್ಕೆ ಉದಾಹರಣೆ ಕಾರ್ಗಿಲ್ ಯುದ್ಧ..
ಒಮ್ಮೆ ಯೋಚಿಸಿ ತರುಣಪ್ರಾಯದ ಎಷ್ಟೋ ವೀರ ಸೈನಿಕರು ತಮ್ಮ ಪ್ರಾಣವನ್ನು ಅರ್ಪಿಣೆ ಮಾಡಿದ್ದು ಸರ್ಕಾರ ಕೊಡುವ ಸಂಬಳಕ್ಕೆ ಅಲ್ಲ
ನಮ್ಮ ಮಾತೃಭೂಮಿಯ ಮಣ್ಣಿಗೆ ಕೈ ಹಾಕಿದರೆ ಉಸಿರು ಕೊಟ್ಟಾದರೂ ಉಳಿಸಿಕೊಳ್ಳುವೆವೂ ಎಂದು ಜಗತ್ತಿಗೆ ತೋರಿಸಿದ್ದು..
ಅದಕ್ಕೆ ಬೆಂಬಲವಾಗಿ ಇಡೀ ರಾಷ್ಟ್ರ
ಒಟ್ಟಾಗಿದ್ದು ಮನೆ ಮನೆಗಳಲ್ಲಿ ನಾವು ಸೈನಿಕನ ತ್ಯಾಗಕ್ಕೆ ಪೂಜೆ ಸಲ್ಲಿಸಿದ್ದು, ನಮ್ಮಗಳ ದಿನದ ಪ್ರಾರ್ಥನೆ ನಮ್ಮ ಗಡಿಕಾಯುವ ಯೋಧನಿಗಾಗಿ ಮೀಸಲಿರಿಸಿದ್ದು,
ಈ ದೇಶ ಪುಟ್ಟ ಮಗುವಿನಿಂದ ಹಿಡಿದು ವೃದ್ಧರವರಿಗೂ..
ಆ ಸೈನಿಕನ ಬೆಂಬಲವಾಗಿ ನಿಂತ ಪ್ರತಿಯೊಂದು ಗಮನಿಸಿದಾಗ..
ಹೆಮ್ಮೆ ಅನ್ನಿಸಿದ್ದು..
ಇಂದೋ ನಾಳೆ ಸಾಯುವ ರೋಗಿ ಹೇಳತ್ತಾನೇ ನನ್ನ ಕೈಯಲ್ಲಿ ಗನ್ ಕೊಡಿ ನಾನು ಹೋರಾಡವೇ ಅಂತ...
ಒಬ್ಬ ವೇಶ್ಯ ತನ್ನ ದೇಹ ಮಾರಿದ ಹಣವನ್ನು ರಾಷ್ಟ್ರ ರಕ್ಷಣೆಗೆ ನೀಡುತ್ತಾಳೆ...
ಬಿಕ್ಷಕರು ಬೇಡಿ ತಂದ ಧನವನ್ನು ದೇಶದ ಭದ್ರತೆಗಾಗಿ ದಾನಗೈಯುತ್ತಾರೆ...
ಪುಟ್ಟ ಪುಟ್ಟ ವಿದ್ಯಾರ್ಥಿಗಳು ತಂದೆ ತಾಯಿ ನೀಡಿದ ಪಾಕೆಟ್ ಮನಿ ಹಣವನ್ನು ದೇಶ ರಕ್ಷಣೆಗೆ ನೀಡುತ್ತಾರೆ...
ನಮ್ಮನ್ನೂ ಯುದ್ದ ಭೂಮಿಗೆ ಕಳುಹಿಸಿ ಅಂತ ರೈತ ತಯಾರು ಆಗತ್ತಾನೆ..
ಇದೆಲ್ಲಾ ನೋಡಿದಾಗ ನಮ್ಮ ಸೈನಿಕನಿ ಎದೆ ಹೆಮ್ಮೆಯಿಂದ ಉಬ್ಬತ್ತೆ...
ತ್ಯಾಗ ಬಲಿದಾನ ವ್ಯರ್ಥವಾಗಲಿಲ್ಲ..
ಯೋಧ ಹಗಲು ರಾತ್ರಿ ಗಡಿಕಾಯಿದು ದೇಶವಾಸಿಗಳುನ್ನು ನೆಮ್ಮದಿಯಿಂದ ನಿದ್ದೆ ಮಾಡಲು ಕಾರಣವಾದ ನಮ್ಮ ಯೋಧರ ತ್ಯಾಗ ಅಂದು ಇಂದು ಎಂದಂದಿಗೂ ಸ್ಮರಣಿಯವಲ್ಲವೇ...
ಯುದ್ಧಭೂಮಿಯಲ್ಲಿ ಪ್ರಾಣತ್ಯಾಗ ಮಾಡಿದ ಆ ಯುದ್ಧ ಜಯಸಿಲು ಕಾರಣೀಭೂತರಾದ ಸರ್ವರನ್ನು ಸ್ಮರಿಸುವ ದಿನವೇ ಕಾರ್ಗಿಲ್ ವಿಜಯೋತ್ಸವ🇮🇳....

ಕಾರ್ಗಿಲ್‌ ವಾರ್‌ ಹೀರೋಗಳು 

- ಕ್ಯಾಪ್ಟನ್‌ ಮನೋಜ್‌ಕುಮಾರ್‌ ಪಾಂಡೆ 
- ನಯಿಬ್‌ ಸುಬೇದಾರ್‌ ಯೋಗೇಂದ್ರ ಸಿಂಗ್‌ ಯಾದವ್‌ 
- ಕ್ಯಾಪ್ಟನ್‌ ವಿಜಯಾಂತ್‌ ಥಾಪರ್‌ 
- ಮೇಜರ್‌ ಪದ್ಮಪಾಣಿ ಆಚಾರ್ಯ 
- ಕ್ಯಾಪ್ಟನ್‌ ಎನ್‌ ಕೆಂಗುರುಸೆ 
- ಕ್ಯಾಪ್ಟನ್‌ ವಿಕ್ರಮ್‌ ಬಾತ್ರಾ 
- ರೈಫಲ್‌ಮ್ಯಾನ್‌ ಸಂಜಯ್‌ಕುಮಾರ್‌ 
- ಕ್ಯಾಪ್ಟನ್‌ ಅನುಜ್‌ ನಾಯರ್‌ 
- ಮೇಜರ್‌ ಅಜಯ್‌ ಸಿಂಗ್‌ ಜಸ್ರೋತಿಯಾ 
- ಕ್ಯಾಪ್ಟನ್‌ ಸೌರಭ್‌ ಕಾಲಿಯಾ 
- ಲೆಫ್ಟಿನೆಂಟ್ ಕೀಸಿಂಗ್ ಕ್ಲಿಫೋರ್ಡ್ ನೊಂಗ್ರುಮ್
- ಲೆಫ್ಟಿನೆಂಟ್‌ ಬಲ್ವಾನ್‌ ಸಿಂಗ್‌ 
- ಕ್ಯಾಪ್ಟನ್‌ ಜೆರ್ರಿ ಪ್ರೇಮ್‌ರಾಜ್‌ 
- ನಾಯಿಕ್‌ ದೀಗೇಂದ್ರ ಕುಮಾರ್‌ 
- ಕ್ಯಾಪ್ಟನ್ ಹನೀಫುದ್ದೀನ್.
- ಮೇಜರ್ ಮರಿಯಪ್ಪನ್ ಸರವಣನ್
- ರೈಫಲ್ಮನ್ ಮೊಹಮದ್ ಅಸ್ಲಾಂ

ನಮ್ಮಯ ನಾಳೆಗಳಿಗಾಗಿ & ಮಾತೃ ಭೂಮಿಯ ಸಂರಕ್ಷಣೆಗಾಗಿ ಮಡಿದ ವೀರಯೋಧರಿಗೆ ಈ ಲೇಖನದೊಂದಿಗೆ ಈ ನಾಲ್ಕು ಸಾಲುಗಳು ಅವರ ಪಾದಚರಣಗಳಿಗೆ ಅರ್ಪಣೆ

"ದೇಶ ಕಟ್ಟುವ ಕಾರ್ಯ ಬದಿಗೊತ್ತಿ 
ಪರರ ಭೂಮಿಯನು ಕಬಳಿಸಲು ಹುಚ್ಚು ಸಾಹಸವನ್ಹೋತ್ತಿ 
ಕಾಶ್ನೀರದಲಿ ಮರಣಹೋಮದ ನರಹಂತಕರ ಎದೆಯಲ್ಲಿ ನಡುಕ ಹುಟ್ಟಿಸಿದ ಸಿಡಲ್ಬರದ ಸಿಂಹದಮರಿಗಳು 
ವೀರೋತ್ಕರ್ಷದ ಧೀರ ಧೀರ ಸುತರೇ 
ಭಾರತಾಂಬೆಯ ರಕ್ಷಣೆಗೆ ಸರ್ವಾದಾ ತ್ಯಾಗದ ಪ್ರತಿರೂಪಿಗಳಾಗಿ 
ಕಾರ್ಗಿಲ್ ಪರ್ವತಗಳ ಮೇಲೆ ಅಪರೇಷನ್ ವಿಜಯದ ಮೂಲಕ ಪಾಕಿಸ್ತಾನಿಗಳ ಹುಟ್ಟಡಗಿಸಿದ ಭಾರತಾಂಬೆಯ ವೀರಪುತ್ರರೇ ಧೀರಸುತರೇ"......

ನಿಮಗಿದೋ ಕೋಟಿ ಕೋಟಿ ಹೃದಯಪೂರ್ವಕ ನಮನಗಳು.

||ಧರ್ಮೋ ರಕ್ಷತಿ ರಕ್ಷಿತಃ|| 🕉🚩