ನಮಗೂ ಮೊದಲು ಅಂದ್ರೆ ಶತಮಾನಗಳ ಹಿಂದೆಯೇ ವಚನಕಾರರು, ಶರಣರು , ಮಹಾನ್ ನಾಯಕರು, ಇವರೆಲ್ಲರೂ ಸಮಾಜಕ್ಕೆ ಒಳ್ಳೆ ಸಂದೇಶ ಕೊಡೊ ಬರಹಗಳನ್ನ , ವಚನಗಳನ್ನ ಬರೆದು ಹೋಗಿದ್ದಾರೆ. ನಾವು ಸಮಾಜಕ್ಕೆ ಸಂದೇಶ ಕೊಡುವ ಬರಹಗಳನ್ನ ಬರಿಯೋಕೆ ಅವರು ಏನೂ ಉಳಿಸಿಲ್ಲ ಎಲ್ಲಾ ಆಗ್ಲೇನೆ ಬರೆದಿದ್ದಾರೆ...
ಆದರೆ ನಾವು ನೀವು ಅವರು ಸಮಾಜಕ್ಕೆ ಕೊಟ್ಟು ಹೋದ ಸಂದೇಶನ ಅನುಕರಣೆ ಮಾಡ್ತಿದ್ದಿವಾ..
ಫಾಲೋ ಮಾಡಿದ್ದೇ ಆದರೆ ಈಗಲೂ ಜಾತಿಗಲಭೆ, ಕೋಮುಗಲಭೆ, ಭಾಷೆ, ನೆಲ, ಜಲ ,ಗಡಿ ಭಾಗದಲ್ಲಿನ ಜಗಳಗಳು ನಡಿತಾನೇ ಇರ್ಲಿಲ್ಲ.
ವಚನಕಾರರನ್ನ, ಶರಣರನ್ನ, ಮಹಾನ್ ನಾಯಕರುಗಳನ್ನ ತಮ್ಮ ತಮ್ಮ ಜಾತಿಗಳಿಗೆ, ಪಂಗಡಗಳಿಗೆ, ಬ್ರಾಂಡ್ ಅಂಬಾಸಿಡರ್ ತರ ಮಾಡ್ಕೋಂಡ್ರೆ ಹೊರತು ದೇಶಕ್ಕೆ, ನಾಡಿಗೆ ಅವರುಗಳು ಕೊಟ್ಟ ಹೋದ ಸಂದೇಶಗಳನ್ನ ಏನ್ ಮಾಡುದ್ವಿ ,ಎಲ್ಲಾ ತಿಳಿದವರು, ತುಂಬಾ ಓದಿದವರೇ ಈ ರೀತಿಯಾಗಿ ನಡೆದುಕೊಳ್ಳುತ್ತಾರೆ ಅನ್ನೋದು ವಿಪರ್ಯಾಸ.
ಮನಸ್ಸಿಗೆ ಸ್ವಲ್ಪ ಖುಷಿ ಕೊಡೊದನ್ನ ಬರೆದರೆ ಸಾಕು ಅನ್ನೋದು ನನ್ನ ಉದ್ದೇಶ...
ಸಮಾಜಕ್ಕೆ ಬುದ್ದಿ ಹೇಳೋ ಬರಹಗಳನ್ನ ಬರಿಯೋ ಅಷ್ಟು ಬುದ್ದಿ ನನ್ನಲ್ಲೂ ಇಲ್ಲ ....
||ಧರ್ಮೋ ರಕ್ಷತಿ ರಕ್ಷಿತಃ|| 🕉🚩