ಕೋರೋನಾ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯೀಸಿಕೊಂಡ ಪಕ್ಷಗಳು ಮತ್ತು ಮೂರ್ಖರಾದ ವಿದ್ಯಾವಂತ ಅನಕ್ಷರಸ್ಥರು.
ಕೋರೋನಾ ಅಲೆಗಳ ಮೇಲೆ ಅಲೆಗಳನ್ನು ತಂದು ಎಲ್ಲೋ ಇದ್ದ ಬದುಕನ್ನು ಎಲ್ಲೋ ಮೂಲೆ ಗುಂಪಾಗಿಸಿದ್ದು ಎಲ್ಲರಿಗೂ ತಿಳಿದೇ ಇದೆ ಮತ್ತು ಅನುಭವಿಸುತ್ತಾ ಇದ್ದೇವೆ ಕೂಡಾ.
ಈ ಕೋರೋನಾ ಮತ್ತು ಪರಿಣಾಮ ಬಿಟ್ಟು ಬಿಡೋಣ ಎಲ್ಲರಿಗೂ ತಿಳಿದೇ ಇದೆ ರಾಶಿ ರಾಶಿ ಸಾವಿನ ಸುದ್ಧಿ ಕಿವಿಗೇ ಬೀಳುತ್ತಲೇ ಇದೆ.
ಇವೆಲ್ಲದರ ಮಧ್ಯೆ ಕೆಲವರು ತಮ್ಮ ಸ್ವಾರ್ಥ ಸಾಧಿಸಿಕೊಂಡರು ಎಂದು ಅನ್ನಿಸುತಿಲ್ಲವೇ???
ಇದೀಗ ರಾಜಕೀಯಕ್ಕೆ ಬರೋಣ.
ಬಾಳೆ ಹಣ್ಣು ಕೊಟ್ಟರೂ ಸೆಲ್ಫೀ ಎಂದು ಕಿಸಿಯುವ ಕಾಲ ಇದು.
ಈ ಸಾವಿನಾಟದ ಮಧ್ಯೆ ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಂಡಿದ್ದು ಎಷ್ಟು ಸರಿ??
ಬೆಡ್ ಬ್ಲಾಕಿಂಗ್ ದಂಧೆ
ಮೊನ್ನೆ ತಾನೆ ಇದು ರಾಜ್ಯದೆಲ್ಲೆಡೆ ಹರಿದಾಡಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ ಸುದ್ಧಿ.
ಮೀಡಿಯಾಗಳಿಗೆ ಸುದ್ಧಿ ಸಿಕ್ಕಿತೆಂದು ದಿನವಿಡೀ ಹಾಕಿ ರುಬ್ಬಿದರೆ,
ಇನ್ಯಾರೋ ಹೆಸರಿಗಾಗಿ ಮಾಡಿದ್ದೆಂದರು,
ಮತ್ಯಾರೋ ಹಲ್ಲು ಕಚ್ಚಿಕೊಂಡು ಹಾರಾಡಿದರೆ,
ಇನ್ನು ಒಬ್ಬರು ಇದು ನಮ್ಮ ಸಹೋದರರಿಗೆ ಮಾಡಿದ ಅನ್ಯಾಯ ಅಂದರು..
ಜನಸಾಮಾನ್ಯನಾಗಿ ನನ್ನದೊಂದು ಪ್ರಶ್ನೆಯಿದೆ..
ನಿಮ್ಮ ಕಿತ್ತೋದ ರಾಜಕೀಯದ ಕಾಟಚಾರಕ್ಕೆ ಯಾಕೆ ಸ್ವಾಮಿ ಬಡವರ ಜೀವದ ಜೊತೆ ಆಟ ಆಡಿದಿರಿ??ಎಷ್ಟೋ ಮಂದಿ ಬೆಡ್ ಸಿಗದೆ, ಆಕ್ಸಿಜನ್ ಇಲ್ಲದೆ ಸತ್ತು ಹೋದರಲ್ಲ, ಅವರಿಗೆ ಯಾರು ನ್ಯಾಯ ಕೊಡುತ್ತೀರಿ???
ಬೀದಿ ಬೀದಿಯಲ್ಲಿ ಹೆಣ ಬಿದ್ದು ಸ್ಮಶಾನದಲ್ಲೂ ಸ್ಥಳ ಸಿಗದಂತೆ ಅಲ್ಲೂ ಕಾಯುತ್ತಾ ನಿಂತರಲ್ಲ ನಿಮ್ಮ ಕಾಟಚಾರಕ್ಕೆ ತಮ್ಮ ಮನೆಯವರನ್ನು ಕಳೆದುಕೊಂಡ ಆ ಜೀವಗಳ ಕಣ್ಣೀರು ಒರೆಸಲು ಯಾರು ಮುಂದೆ ಬಂದು ನಿಲ್ಲುತ್ತೀರಿ???
ಬಿಜೆಪಿಯವರಾ?? ಇಲ್ಲಾ ಕಾಂಗ್ರೆಸ್'ನವರಾ??? ಇಲ್ಲಾ ಸಿಪಿಐಎಂ, ಜೆಡಿಎಸ್'ನವರಾ????
ಇವ್ರೆಲ್ಲಾ ಸಾಯ್ಲಿ ಇರೋದೆ ಇದಕ್ಕಾಗಿ,
ಆದ್ರೆ ವಿದ್ಯಾವಂತ ಪ್ರಜ್ಞಾವಂತ ಬುದ್ಧಿಜೀವಿಗಳೇಕೆ ಲದ್ದಿ ತಿನ್ನುತ್ತಾ ಕುಳಿತಿರಿ??
ಪ್ರತಿಯೊಂದಕ್ಕೂ ವಿರೋಧ ಪಕ್ಷಗಳನ್ನು ದೂರುತ್ತಾ ಇರುವ ಅವರನ್ನು ಅನುಸರಿಸಿಕೊಂಡು ಯಾಕ್ರಿ ಸಾಯ್ತಾ ಇದೀರಿ??
ಕೋವಿಡ್ ತಂದಿರೋದು ಬಿಜೆಪಿಯವ್ನು ಅಂದಿರೋನು, ಬಿಜೆಪಿಯವ್ರು ಮಾಡಿರೋ ಲಾಕ್'ಡೌನ್ ವಿರೋಧಿಸಿ ಸುತ್ತಾಡಾಬೋದಿತ್ತು ಯಾಕಂದ್ರೆ ಇವ್ನು ಕಾಂಗ್ರೆಸ್ ಅಲ್ವಾ ಇವ್ನಿಗೆ ಯಾಕ್ ಕೋರೋನಾ ಬರುತ್ತೇ?? ಆದ್ರೂ ಅವ್ನು ಯಾವ ಬೀದಿಲೂ ಸುತ್ತಾಡ್ಲಿಲ್ಲ, ಯಾಕಂದ್ರೆ ಅವ್ನಿಗೆ ಗೊತ್ತು ಬಂದಿರೋನು ಕೋರೋನಾ ಅವ್ನಿಗ್ ಯಾರೂ ಲೆಕ್ಕ ಇಲ್ಲಾಂತ,
ವಾಕ್ಸಿನ್ ತಗೋಬೇಡಿ ಅಂದೋನು ತಗೊಳ್ದೆ ಇರ್ಲಿಲ್ಲ,
ಹಾಕಿಸ್ಕೊಂಡ,
ಬಿಜೆಪಿಯವ್ರ ವ್ಯಾಕ್ಸಿನ್ ಅಂದೋನು ಯಾಕ್ ತಗೋಬೇಕಿತ್ತು??
ವಿರೋಧ ಪಕ್ಷದೋನು ವಿರೋಧಿಸಿ ಹಾಗೇ ಕುತ್ಕೋಬೇಕಿತ್ತು ಅಲ್ವಾ??
ಇಂತೋರ್ನ ತಲೆ ಮೇಲೆ ಹೊತ್ಕೊಂಡು ತಿರ್ಗಾಡೋ ನಿಮ್ಗೇನ್ರಿ ಹೇಳ್ಬೇಕು???
ಥೂ ಅಸಹ್ಯ ಅನ್ನಿಸ್ತಾ ಇಲ್ವಾ???
ಎಷ್ಟೋ ಓದಿ, ಬೆಂಗ್ಳೂರು, ಮಂಗ್ಳೂರು, ಮೈಸೂರು ಯುನಿವರ್ಸಿಟಿಲೀ ಮಾಸ್ಟರ್ ಮಾಡಿ ಇಷ್ಟೂ ಜ್ಞಾನ ಇಲ್ಲಾಂದ್ರೆ ನೀವ್ಯಾವ ಬುದ್ದಿವಂತ್ರೋ ಸಾಮಾನ್ಯ ಜ್ಞಾನನೂ ಇಲ್ದೇ ಇರೋರು??
ರಾಜಕೀಯಕ್ಕಾಗಿ ಕಿತ್ತಾಡ್ತಾ ಇದ್ದೀರಲ್ಲಾ??
ನಿಮ್ ಮನೇಲಿ ಸತ್ತೋದ್ರೆ ಯಾವ ರಾಜಕೀಯದೋನು ಬರ್ತಾನೆ??
ಬಿಜೆಪಿಯೋನು ಬರ್ತಾನ ಇಲ್ಲಾ ಕಾಂಗ್ರೇಸ್ನೋನು ಬರ್ತಾನ??
ಜೀವ ಉಳಿಸ್ಕೋಳ್ಳೋಣ ಈವಾಗ ಮೊದ್ಲು ಇಲ್ಲಾಂದ್ರೆ ನಮ್ ಹೆಣ ನೋಡೋ ಭಾಗ್ಯನೂ ನಮ್ ಮನೆವ್ರಿಗೂ ಸಿಗೋದಿಲ್ಲ.
ಬದ್ಕಿದ್ರೆ ರಾಜಕೀಯ ನೋಡೋಣ.
ಕೊನೆಗೊಂದು ಮಾತು.
ಸಾವಿನಲ್ಲಿ ರಾಜಕೀಯ ಆಟ ಆಡಿದ ಎಲ್ಲಾ ಪಕ್ಷಗಳಿಗೂ ಭಾವಪೂರ್ಣ ಶ್ರದ್ಧಾಂಜಲಿ,ಇನ್ನಾದರೂ ಜನಸಾಮಾನ್ಯರು ಬದಲಾಗ್ರೋ ರಾಜಕೀಯ ರಾಜಕೀಯ ಅನ್ನೋದನ್ನು ನಿಲ್ಸಿ ಅವರಿಗಾಗಿ ಕಚ್ಚಾಟವಾಡಿ, ಅಭಿಮಾನ ತೋರ್ಸೋದನ್ನು ಮೊದ್ಲು ನಿಲ್ಸಿ.
ರಾಜಕಾರಣಿ ಕಳ್ಳನೇ ಅನ್ನೋ ಮಾತಿದೆ.
ತಪ್ಪು ಮಾಡ್ದಾಗ ಎಷ್ಟೇ ಒಳ್ಳೇವಾನಾದ್ರೂ ಪ್ರಶ್ನೆ ಮಾಡ್ರೋ.
ಪಕ್ಷ ನೋಡಿ ಓಟ್ ಹಾಕ್ಬೇಡ್ರೋ ಅವ್ನ ಯೋಗ್ಯತೆ ನೋಡಿ ಓಟ್ ಹಾಕ್ರಿ.
ಬದಲಾವಣೆ ಬರಹದಿಂದ, ಭಾಷಣದಿಂದ ಸಾಧ್ಯ ಇಲ್ಲ.
ದೇಶದ ಬದಲಾವಣೆ ನಿಮ್ಮ ಕೈಯಲ್ಲಿದೆ.
ಅದು ಮನಸ್ಥಿತಿ ಬದಲಾಗಿ ಒಳ್ಳೆಯ ಆಲೋಚನೆ ಬಂದು ದೇಶದ ಬಗ್ಗೆ ಯೋಚಿಸಿದಾಗ ಮಾತ್ರ ಸಾಧ್ಯ....