ಭಾರತವನ್ನು ಕಾಪಡುವುದೇ ನಮ್ಮೆಲ್ಲರ ಜವಾಬ್ದಾರಿ.

 


ಭಾರತ ಕ್ರಿಶ್ಚಿಯನ್ ಇಲ್ಲವೇ ಮುಸ್ಲಿಂ ರಾಷ್ಟ್ರವಾಗಿ ಕುರಾನ್ ಅಥವಾ ಬೈಬಲ್ ಅನ್ನು ಓದಿಕೊಂಡು, ಇಂಗ್ಲಿಷ್ ಹಾಗು ಉರ್ದು ಭಾಷೆ ಮಾತಾಡಿಕೊಂಡು ನಮ್ಮ ಯುಗಾದಿ, ರಾಮನವಮಿ, ಗಣೇಶ ಚತುರ್ಥಿ, ಸಂಕ್ರಾಂತಿಗಳನ್ನು ಬಿಟ್ಟು ವರ್ಷಕ್ಕೆ ಕೆಲವೇ ಕೆಲವು ಹಬ್ಬಗಳನ್ನು ಆಚರಿಸಿಕೊಂಡು, ಬೇರೆ ಜನಾಂಗದವರಿಗೆ ಬದುಕಲು ಬಿಡದೆ ಮತಾಂತರ ಮಾಡುತ್ತಾ ಬದುಕಿದರೆ ಹೇಗಿರುತ್ತದೆ? ಇಂತಹ ಭಾರತದ ದೇಶ ಊಹಿಸಲು ಕಷ್ಟ ಅಲ್ಲವೇ? ಹೌದು ನಿಮ್ಮ ಊಹೆ ಸರಿಯಾಗಿದೆ. ನಾನು ಹೇಳಹೊರಟಿರುವುದು ಮತಾಂತರ ಮಾಡುತ್ತಿರುವ ಅವಾಂತರ ಬಗ್ಗೆಯೇ...


ಇಸ್ಲಾಂ ಹಾಗು ಕ್ರೈಸ್ತ ಎಲ್ಲೆಲ್ಲಿ ಕಾಲಿಟ್ಟಿವೆಯೋ ಆ ದೇಶಗಳ ಸಂಸ್ಕೃತಿ ಉಳಿದಿಲ್ಲ. ಭಾರತಕ್ಕೆ ಮತಾಂತರ ಹೊಸತೇನಲ್ಲ. ಬೌದ್ಧ ಹಾಗು ಜೈನ ಧರ್ಮಗಳು ಮತಾಂತರ ಮಾಡುತ್ತ ಬಂದಿದ್ದವಾದರು ಬಲವಂತದ ಮತಾಂತರ ಶುರುವಾಗಿದ್ದೆ ಮೊಘಲರು ಕಾಲಿಟ್ಟಾಗಿನಿಂದ. ಆಮೇಲೆ ಬಂದ ಪೋರ್ಚುಗೀಸರು ಕಡಿಮೆ ಪ್ರಮಾಣದ ದಾಳಿ ಮಾಡಲಿಲ್ಲ, ಗೋವೆಯಲ್ಲಿ ಲಕ್ಷಾಂತರ ಹಿಂದೂಗಳನ್ನು ಮತಾಂತರ ಮಾಡಿ ಒಪ್ಪದೇ ಇರುವವರನ್ನು ಬೆಂಕಿ ಹಚ್ಚಿ ಜೀವಂತ ಸುಟ್ಟು ಹಾಕಿದ್ದು ಇತಿಹಾಸದಲ್ಲಿ ದಾಖಲಾಗಿದೆ.


ಡಾ.ಭೀಮರಾವ್ ರಾಮ್ ಜೀ ಅಂಬೇಡ್ಕರ್ ಅವರು " ನಾನೊಬ್ಬ ಹಿಂದುವಾಗಿ ಹುಟ್ಟಿದರೂ, ಹಿಂದುವಾಗಿ ಸಾಯಲಾರೆ” ಎಂದು ಹೇಳಿದ್ದಾರೆ ಎನ್ನುವ ಒಂದು ಹೇಳಿಕೆ ಹಿಂದುಸ್ತಾನವನ್ನು ನಡುಗಿತು.


ನಮ್ಮ ಮೊದಲ ಪ್ರಧಾನಿ ನೆಹರು ತಮ್ಮ ಸೆಕ್ಯುಲರ್ ಇಮೇಜ್ ಕಾಪಾಡಿಕೊಳ್ಳುವದಕ್ಕೊಸ್ಕರ ಇತಿಹಾಸವನ್ನು ಕಮ್ಯುನಿಸ್ಟರ ಕೈ ಗೆ ಕೊಟ್ಟರು, ಮತಾಂಧ ಮೌಲಾನಾ ಅಬ್ದುಲ್ ಕಲಾಂ ಅಜಾದ್ ಅವರನ್ನು ವಿದ್ಯಾ ಮಂತ್ರಿಯಾಗಿ ನೇಮಿಸಿತಲ್ಲದೆ ಮತಾಂತರ ನಿಷೇಧ ಕಾನೂನನ್ನು ವಿರೋಧಿಸಿ ತಾವೊಬ್ಬ ಭಾರತ ಕಂಡ ಅಪ್ರತಿಮ ಸೆಕ್ಯುಲರ್ ಎಂದು ನಿರೂಪಿಸಿದರು.


ಮತಾಂತರ ಮಾಡಲು ಮುಸ್ಲಿಂರು ಬಳಸುವುದು ಆಕ್ರಮಣಕಾರಿ ವಿಧಾನವಾದರೆ ಕ್ರೈಸ್ತರು ಹಾಗಲ್ಲ ಅವರದು ವಿನಯತೆಯ ದಾರಿ, ನೇರವಾಗಿ ನಂಬಿಕೆಯ ಮೇಲೆ ಹೊಡೆಯುವುದೆ ಇವರ ಕೆಲಸ, ಮಿಷನರಿಗಳು ಭಾರತಕ್ಕೆ ಕಾಲಿಟ್ಟಾಗ ಜೀಸಸ್ ಒಬ್ಬನೇ ದೇವರು ಎಂಬದನ್ನು ನಂಬಿಸಲು ಪ್ರಯತ್ನ ಮಾಡಿದವು, ಈ ಪ್ರಯತ್ನ ಸಫಲವಾಗದ ಕಾರಣ ನಮ್ಮ ಧರ್ಮ ಗ್ರಂಥಗಳನ್ನು ತಿರುಚುವ ಕೆಲಸ ಪ್ರಾರಂಭವಾಯಿತು, ಹಿಂದೂ ದೇವರುಗಳ ಅವಹೇಳನ ಮಾಡಿತು, ಇದು ಅಷ್ಟೊಂದು ಪ್ರಭಾವ ಬಿರದಿದ್ದ ಕಾರಣ ಎಲ್ಲಿ ಬಡತನ, ರೋಗ, ಅಸ್ಪೃಶ್ಯತೆ ಇರುತ್ತದೋ ಅಲ್ಲಿ ಸೇವೆಯ ಅಸ್ತ್ರವನ್ನು ಪ್ರಯೋಗಿಸಿ ಸ್ವಲ್ಪ ಯಶಸ್ಸನ್ನು ಕಂಡಿತು. ಇಂದು ಈ ಪರಿಸ್ಥಿತಿ ಬದಲಾಗಿಲ್ಲ ಕೊಲೆ ಸುಲಿಗೆ, ಧರ್ಮ, ಅಧರ್ಮ ಏನೇ ಆಗಲಿ ತಮ್ಮ ಮತ ವಿಸ್ತರಣೆ ಆಗಬೇಕು ಎನ್ನುವುದೇ ಈ ಧರ್ಮಗಳ ಉದ್ದೇಶ. ಇಷ್ಟೆಲ್ಲ ಆದರೂ ಹಿಂದೂಗಳು ಬದಲಾಗಿಲ್ಲ ಬುದ್ದಿಯನ್ನು ಕಲಿತಿಲ್ಲ.

ಮತಾಂತರದಿಂದ ನಮಗೇನು ತೊಂದರೆ ಅವರಿಗೆ ಇಷ್ಟವಾದ ಧರ್ಮವನ್ನು ಅವರು ಅನುಸರಿಸಲಿ ಎಂದು ಕೆಲವರು ಬೊಬ್ಬೆಹೊಡೆಯುತ್ತಾರೆ,ಆದರೆ ಇಲ್ಲಿ ನಮ್ಮ ವಿರೋಧವಿರುವುದು ಬಲವಂತ ಹಾಗು ಆಮಿಷ ಮತಾಂತರಕ್ಕೆ ಅಷ್ಟೇ.


ಮಿಷನರಿಗಳು ಯುವಕರನ್ನು ಬ್ರೈನ್ ವಾಷ್ ಮಾಡುವುದಷ್ಟೇ ಅಲ್ಲದೆ ಹಲವರನ್ನಾದರು ನೀನು ಕ್ರೈಸ್ತ ಮತಕ್ಕೆ ತಂದರೆ ನೀನು ನಿಜವಾದ ಕ್ರೈಸ್ತ ಎಂದು ತಲೆಗೆ ತುಂಬುತ್ತಿದ್ದಾರೆ ಹೀಗೆ ಬ್ರೈನ್ ವಾಷ್ ಆದ ಯುವಕರು ಹಳ್ಳಿಗಳಿಗೆ ಬುಡಕಟ್ಟು ಪ್ರದೇಶಗಳಿಗೆ ತಿರುಗಾಡಿ ಕ್ರೈಸ್ತ ಮತ ಬೆಳೆಸುತ್ತಿದ್ದಾರೆ.

"ಶಿಕ್ಷಣ, ವೈದ್ಯಕೀಯ ಸೇವೆ ಮತ್ತು ಉದ್ಯೋಗದ ಅಮಿಷ ಒಡ್ಡಿ ಮುಗ್ಧ ಮತ್ತು ಅಮಾಯಕರನ್ನು ಮತಾಂತರಿಸಲಾಗಿದೆ. ಮತಾಂತರ ಚಟುವಟಿಕೆಗೆ ದೊಡ್ಡ ಪ್ರಮಾಣದಲ್ಲಿ ವಿದೇಶಿ ಹಣಕಾಸು ನೆರವು ಹರಿದು ಬರುತ್ತದೆ. ಮಿಷನರಿಗಳು ವಿದೇಶಿ ಸಂಸ್ಥೆಗಳಿಂದ ನಿಯಂತ್ರಿಸಲ್ಪಡುತ್ತಿದ್ದಾರೆ. ಇದನ್ನೆನ್ನಾದರು ಹಿಂದೂ ಸಂಘಟನೆಗಳು ವಿರೋಧಿಸಿದರೆ ಇವುಗಳಿಗೆ ಕೋಮುವಾದಿ ಪಟ್ಟ ಬಳಿಯಲಾಗುತ್ತದೆ. ಕ್ರೈಸ್ತರ ಮೇಲೆ ನಡೆಯುವ ಪ್ರತಿ ಘಟನೆಯನ್ನು ಮೀಡಿಯಾಗಳು ಇದು ಕ್ರೈಸ್ತರ ಮೇಲಿನ ದಾಳಿ ಎಂದು ಸುದ್ದಿ ಹಬ್ಬಿಸುತ್ತವೆ ಇದಕ್ಕೆ ಬುದ್ಧಿಜೀವಿಗಳ ಬೆಂಬಲವನ್ನು ಪಡೆದು ಹಿಂದೂಗಳ ಹೋರಾಟವನ್ನು ಕುಗ್ಗಿಸಲಾಗುತ್ತದೆ. ಇತ್ತ ದೊಡ್ಡ ದೊಡ್ಡ ಮಠಗಳನ್ನು ಕಟ್ಟಿರುವ ಸ್ವಾಮೀಜಿಗಳು ಹಿಂದೂಗಳ ಬೆಂಬಲಕ್ಕೆ ನಿಲ್ಲದೆ ತಮ್ಮ ಜಾತಿ ನಾಯಕನಿಗೆ ಬೆಂಬಲ ಕೊಡುವುದೇ ಇವರ ಕೆಲಸವಾಗಿದೆ.

ಭಾರತ ಬಹುಸಂಖ್ಯಾತ ಹಿಂದೂಗಳಿರುವ ಹಿಂದೂ ರಾಷ್ಟ್ರ.

1947 ರಲ್ಲಿ ಧರ್ಮದ ಹೆಸರಿನಲ್ಲಿ ದೇಶ ವಿಭಜನೆಯಾದ ಬಳಿಕ ಇನ್ನೆಲ್ಲಿಯ ಜ್ಯಾತ್ಯಾತಿಯತೆ.

ಹಿಂದೂಗಳು ಜಾಗೃತರಾಗಬೇಕಿದೆ, ತಮ್ಮ ಧರ್ಮವನ್ನು ಉಳಿಸಲು ಹೋರಾಡಬೇಕಿದೆ, ಬೇರೆ ಧರ್ಮದವರ ವಿರುದ್ಧ ಹೋರಾಡುವ ಬದಲು ಮೊದಲು ನಮ್ಮೊಳಗಿನ ವ್ಯವಸ್ಥೆ ಬದಲಾಯಿಸಬೇಕಿದೆ, ಸದ್ದಿಲ್ಲದೇ ಭಾರತಿಯತೆಯನ್ನು ಜಾಗೃತಗೊಳಿಸಬೇಕಿದೆ, ಧರ್ಮ ಶಿಕ್ಷಣ ಅತ್ಯಗತ್ಯ, ಪ್ರತಿ ಊರಿನಲ್ಲೂ, ಎಲ್ಲ ದೇವಾಲಯಗಳಲ್ಲಿಯೂ ಭಗವದ್ಗೀತೆ ಪಠಣೆ ಮಾಡಿ,ಹಿಂದೂ ಧರ್ಮಕ್ಕೆ ಎದುರಾಗಿತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕಿದೆ.ಹಿಂದೂ ಸ್ವಾಮೀಜಿಗಳು ತಮ್ಮ ತಮ್ಮಲ್ಲೆ ಹೊಡೆದಾಡುವುದನ್ನು ಬಿಟ್ಟು ಒಗ್ಗಟ್ಟಾಗಿ ದಲಿತ ಕೇರಿಗಳಲ್ಲಿ ಸುಧಾರಣೆ ತರಬೇಕಾಗಿದೆ.

ಮಿಷನರಿಗಳು ದಲಿತರನ್ನು ಬ್ರಾಹ್ಮಣರ ಹಾಗು ಮೇಲ್ವರ್ಗದವರ ವಿರುದ್ಧ ಎತ್ತಿ ಕಟ್ಟಿ ಹಿಂದೂ ಧರ್ಮವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ, ಮಿಷನರಿಗಳು ಇನ್ನು ಮುಂದೆ ಹೋಗಿ ಹಣಬಲದಿಂದ ಕೆಲವು ಫೇಕ್ ಸ್ವಾಮೀಜಿಗಳನ್ನು ಹುಟ್ಟುಹಾಕಿದ್ದಾರೆ, ಹಿಂದೂ ಧರ್ಮಗಳ ವಿರುದ್ಧ ಮಾತಾಡುವುದೇ ಇವರ ಕೆಲಸ. ಇದರ ವಿರುದ್ಧ ಹೋರಾಡಬೇಕಿದೆ.

ಭಾರತದ ಎಲ್ಲ ಸಮಸ್ಯೆಗಳಿಗೂ ಹಿಂದುತ್ವದಲ್ಲಿ ಉತ್ತರವಿದೆ, ಇಲ್ಲಿಯ ಧರ್ಮ, ಸಂಸ್ಕೃತಿ ದೇಶದ ಜೊತೆ ಒಂದಕ್ಕೊಂದು ಬೆರೆತುಕೊಂಡಿದೆ. ಹೀಗಾಗಿಯೇ ಬೇರೆ ಮತಗಳು ನಮ್ಮ ಸಂಸ್ಕೃತಿಯ ಮೇಲೆ ಪ್ರಹಾರ ಮಾಡುತ್ತಿವೆ. ಎಲ್ಲಿಯವರೆಗೂ ನಮ್ಮ ಸಂಸ್ಕೃತಿಯನ್ನು ನಾವು ಉಳಿಸುತ್ತೆವೆಯೋ ಅಲ್ಲಿಯವರೆಗೂ ಈ ದೇಶ ಭಾರತವಾಗಿ ಉಳಿದಿರುತ್ತದೆ. ಭಾರತವನ್ನು ಕಾಪಡುವುದೇ ನಮ್ಮೆಲ್ಲರ ಜವಾಬ್ದಾರಿ.

✍️ ಅನ್ವೇಷ್ ಕೇಕುಣ್ಣಾಯ