ಓದುಗರಿಗೆಲ್ಲ ಸ್ವಾಮಿ ವಿವೇಕಾನಂದರ ಜನ್ಮದಿನ ಹಾಗೂ ರಾಷ್ಟ್ರೀಯ ಯುವದಿನದ ಶುಭಾಶಯಗಳು...
ರಾಷ್ಟ್ರೀಯ ಯುವ ದಿನ
ದೇಶದ ಯುವಜನತೆ ಸಂಭ್ರಮದಿಂದ ಅಚರಿಸಬೇಕಾದ ಹಬ್ಬ. ಅದರೆ ಇಂದಿನ ಭಾರತದಲ್ಲಿ ಯುವಕರಿಗೆ ತಮಗಾಗಿ ಒಂದು ದಿನ ಮೀಸಲಾಗಿದೆ ಎಂಬ ಸತ್ಯವನ್ನು ಎಂದೊ ಮರೆತ್ತಿದ್ದಾರೆ. ವಿವೇಕಾನಂದರ ಜನ್ಮದಿನವಾ, ರಜಾ ಏನಾದರೂ ಸಿಗುತ್ತಾ ಎಂದು ಯೋಚಿಸುವ ಮನಸ್ಥಿತಿಗೆ ತಲುಪಿದ್ದಾರೆ.
ಸನಾತನ ಧರ್ಮದ ಭಾರತೀಯ ಸಂಸ್ಕೃತಿಯ ಆರಾಧಕರಾಗಿ, ವಿಶ್ವದಲ್ಲಿ ವಿಶ್ವಮಾನವ ಸಂದೇಶವನ್ನು ನೀಡಿದ ಪ್ರತಿಭಾವಂತರದ ಸ್ವಾಮಿ ವಿವೇಕಾನಂದರು ಹಿಂದುತ್ವ ಮತ್ತು ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ತಿಳಿಸಿ ಕೊಟ್ಟ ಮಹಾನುಭಾವರು. ಇವರ ಮಾತುಗಳು, ಪುಸ್ತಕಗಳು ಈಗಲೂ ಅನೇಕ ಜನರಿಗೆ ಒಂದು ಸ್ಪೂರ್ತಿ ಹಾಗೂ ಆತ್ಮವಿಶ್ವಾಸ ಮೂಡಿಸುತ್ತದೆ
ಬದುಕಿನಲ್ಲಿ ಉದ್ದಾತ ದೈಯ, ಮಾನವೀಯ ಚಿಂತನೆಗಳನ್ನು ಇಟ್ಟುಕೊಂಡು , ಹಿಂದೂ ಪರಂಪರೆ ನಶಿಸುವ ಹಂತದಲ್ಲಿರುವಾಗ ಶ್ರೀ ಕೃಷ್ಣನವತಾರಿಯಾಗಿ ಬಂದ ನರೇಂದ್ರ ಇಂದಿನ ಯುವ ಪೀಳಿಗೆಯ ಹೀರೋ ಆಗಬೇಕಿತ್ತು, ದುರಂತವೆಂದರೆ ಮಚ್ಚು, ಲಾಂಗು ಹಿಡಿದು ದೇಶದ್ರೋಹ ಕೆಲಸ ಮಾಡುತ್ತಾ, ಸಿಗರೇಟು ಸೇದೊ ನಟರು ಅವರ ಪಾಲಿನ ಹೀರೋ ಆಗಿದ್ದೂ ತುಂಬಾ ದುರದುಷ್ಟಕರ ಸಂಗತಿ. ನಮ್ಮನ್ನಾಳಿದ ಮುತ್ತಾಳ ರಾಜಕಾರಣಿಗಳ ಬೇಜವಾಬ್ದಾರಿಯಿಂದ ತಪ್ಪು ಇತಿಹಾಸವನ್ನು ಈಗಲೂ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸುತ್ತಿರುವುದು ಘನ ಘೋರ ದುರಂತ...!
ವಿವೇಕಾನಂದರು ಭಾರತದ ನಿಜವಾದ ಸಾಂಸ್ಕೃತಿಕ ರಾಯಭಾರಿ, ಅವರೇ ಮೊದಲು ಸಾಗರ ದಾಟಿ ವಿದೇಶಿ ನೆಲದಲ್ಲಿ ಭಾರತದ ಭವ್ಯತೆಯ ಹಿಂದೂ ಧರ್ಮದ ಶ್ರೇಷ್ಠತೆಯ ವೇದ,ಉಪನಿಷತ್ತು, ಭಗವದ್ಗೀತೆಯ ಮಹತ್ವ ಚಿಂತನೆಗಳ ಜಗತ್ತಿಗೆ ತಮ್ಮ ಶ್ರೇಷ್ಠ ಭಾಷಣದ ಮುಖೆನ ಸಾರಿದರು..
ಅಮೆರಿಕದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನಕ್ಕೆ ಭಾಗವಹಿಸಲು ಸ್ವಾಮೀಜಿ ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ. ಇದರ ನಡುವೆ ಬ್ರಿಟಿಷರ ದಾಸ್ಯದಲ್ಲಿ ಭಾರತ ನರಳುತ್ತಿದ್ದ ಸಮಯದಲ್ಲಿ ಒಬ್ಬ 30 ವರ್ಷದ ತರುಣ ಅಮೆರಿಕದ ನೆಲದಲ್ಲಿ ಜ್ಞಾನಿಗಳು, ಪಂಡಿತರ ನಡುವೆ ಘರ್ಜಿಸಿದ ರೀತಿ... ಭಾರತದ ಹಿರಿಮೆಯ ಸಂಗತಿ ಇದು.
ಅಂದು "ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ" ಎಂಬ ವಿವೇಕವಾಣಿ ಸುಭಾಷ್ ಚಂದ್ರ ಬೋಸ್ ನಂತಹ ಅನೇಕ ವೀರ ಯೋಧರಿಗೆ ಸ್ಫೂರ್ತಿ ನೀಡಿತು,
ವಿಶ್ವ ,ಭಾರತದ ಸಂಸೃತಿ ಮತ್ತು ಹಿಂದೂ ಪರಂಪರೆಯನ್ನು ಗೌರವದಿಂದ ಕಾಣಲು ಮತ್ತು ಅಧ್ಯಯನ ಮಾಡಲು ಕಾರಣ ಅದೇ ವಿವೇಕವಾಣಿ
ಆ ಸಮ್ಮೇಳನದ ಭಾಷಣದುದ್ದಕ್ಕೂ ಸ್ವಾಮೀಜಿ ಧರ್ಮದ ವ್ಯಾಖ್ಯಾನ ,ಮಾನವೀಯತೆಯ ವ್ಯಾಖ್ಯಾನದ ಪಾಠವನ್ನು ಎಲ್ಲ ಧರ್ಮಗಳಿಗೂ ಮಾಡಿದರೂ, ಎಲ್ಲ ಧರ್ಮಗಳ ತಳಹದಿಯಾದ ಹೆಮ್ಮೆಯ ಹಿಂದೂ ಧರ್ಮದ ಪರವಾಗಿ ಬಂದಿರುವೆ ಎಂದು,ಹೇಳಿ ಭಾರತವ ಹಿಂದೂ ಧರ್ಮವ ಸದಾ ಜರಿಯುತ್ತಿದ್ದ ವಿದೇಶಿ ಕ್ರಿಸ್ಟಿಯನ್ನ ಮಿಷಿನರಿಗಳಿಗೆ ಮುಸ್ಲಿಂ ಮತಾಂಧರಿಗೆ ಹೊಡೆದಂತೆ ಹೇಳಿದ ಸ್ವಾಮೀಜಿ, ಭಾರತದ ಮೇಲೆ ಬ್ರಿಟಿಷರ ದಬ್ಬಾಳಿಕೆ ಬಗ್ಗೆ ಎಷ್ಟೊಂದು ಚಿಂತಿಸಿರಬಹುದೆಂದು ಯೋಚಿಸಿ..
ಇದಕ್ಕೂ ಮೊದಲು ಸ್ವಾಮೀಜಿ "ಬ್ರದರ್ಸ್ ಅಂಡ್ ಸಿಸ್ಟರ್ ಆಫ್ ಅಮೆರಿಕಾ" ಅಂತ ಭಾಷಣ ಪ್ರಾರಂಭಿಸಿದಾಗ ಇಡೀ 7 ಸಾವಿರ ಜನರಷ್ಟು ಸೇರಿದ್ದ ಸಭೆ ಚಪ್ಪಾಳೆಗಳ ಸುರಿ ಮಳೆಯೆ ಆಗಿತ್ತು ಎಂದರೆ ಆ ಶ್ರೇಷ್ಠನ ಜ್ಞಾನ ಎಷ್ಟಿರಬಹುದೆಂದು ಊಹಿಸಲಸಾಧ್ಯ...
ಸ್ವಾಮೀಜಿ ಭಾರತದ ಮೇಲೆ ಅಮೆರಿಕಾದ ಕ್ರಿಸ್ಟಿಯನ್ನ ಮಿಷನರಿಗಳು ಮಾಡುತಿದ್ದ ಘೋರ ಅಪರಾಧಗಳ ಅವರ ನೆಲದಲ್ಲೇ ಅವರ ಚರ್ಚಗಳಲ್ಲಿ ಜಾಡಿಸದೆ ಬಿಡಲಿಲ್ಲ, ನಮ್ಮ ದೇಶಕ್ಕೆ ನಿಮ್ಮ ಮಿಷನರಿಗಳ ಕಳಿಸಿ ಧರ್ಮ ಪ್ರಚಾರ ಮಾಡುತಿರಲ್ಲ ,ನನ್ನ ದೇಶದ ಹಸಿದವರಿಗೆ ಅನ್ನ ನೀಡಿ ಮೊದಲು..ಅದೇ ಧರ್ಮ, ನೀವು ಮಾಡುತ್ತಿರುವುದು ಅಧರ್ಮ ಕಾರ್ಯ ಎಂದು ಮಾನವೀಯತೆಯ ಪಾಠ ಮಾಡಿದರು.. ಯುರೋಪಿನ ನೆಲದಲ್ಲಿ ನಿಂತು ಅವರನ್ನು ಜಾಡಿಸಿದ ಸ್ವಾಮೀಜಿ, ನನ್ನ ದೇಶ ಕರ್ಮ ಭೂಮಿ ಎಂದು ವಿಶ್ವಕ್ಕೆ ಮನುಜ ಪಥ ಮಾಡುತ್ತಲೇ ಬಂದಿರುವ ದೇಶ ನಿಮ್ಮ ದಾಸ್ಯದಿಂದ ಎದ್ದು ಬಂದು ಮತ್ತೆ ವಿಶ್ವಗುರುವಾಗುತ್ತೆ ಅಂತ ಭವಿಷ್ಯ ನುಡಿದಿದ್ದರು ಸ್ವಾಮೀಜಿ...
ತಮ್ಮ ವಿದೇಶಿ ಪಯಣದ ಸಮಯದಲ್ಲಿ ಸ್ವಾಮೀಜಿ ವೇದಾಂತ ವಿಷಯಗಳ ಕುರಿತಾಗಿ, ಹಿಂದೂ ಧರ್ಮದ ಕುರಿತಾಗಿ, ಸಾದು ಸಂತರ ಕುರಿತಾಗಿ, ಅಲ್ಲಿರುವ ಎಷ್ಟೋ ಜನರುಗಳಿಗೆ ಪಾಠ ಪ್ರವಚನಗಳ ನೀಡಿದರು..
ಅವರ ಪಾಂಡಿತ್ಯದ ಎಷ್ಟೋ ಪ್ರವಚನಗಳು ಎಲ್ಲ ರಂಗದ ಕುರಿತಾಗಿ ಅದರಲ್ಲೂ ಶಿಕ್ಷಣ, ಆಧ್ಯಾತ್ಮ ಅಭಿವೃದ್ಧಿಯ ಕುರಿತಾದ ಚಿಂತನೆಗಳು ತುಂಬಾ ಮಹತ್ವ ಹಾಗೂ ಈಗಲೂ ಪ್ರಸ್ತುತ ...
ಅವರ ಚಿಂತನೆಗೆ ಮಾರು ಹೋಗಿ ಭಾರತದ ಸೇವೆಗೆ ಅಣಿಯಾದವರಲ್ಲಿ ತುಂಬಾ ಪ್ರಮುಖರಲ್ಲಿ ಸಿಸ್ಟರ್
ನಿವೇದಿತಾ ಅವರು ಕೂಡಾ ಒಬ್ಬರು. ಈಗೇ ವಿದೇಶಿ ನೆಲದಲ್ಲಿ ಸ್ವಾಮೀಜಿಯ ದಿಗ್ವಿಜಯ ಎಂದೆಂದಿಗೂ
ಭಾರತಿಯರಿಗೆ ಅವಿಸ್ಮರಣೀಯ..
ಇಂಗ್ಲೆಂಡಿನಲ್ಲಿ ನಿಂತು ತನ್ನ ದೇಶವನ್ನು ಹಾಳುತ್ತಿದ್ದವರಿಗೆ ಜಾಡಿಸಿದ ರೀತಿ, ಎಚ್ಚರಿಕೆ ನೀಡಿದ ರೀತಿ ಅದ್ಭುತವಾಗಿತ್ತು, ಎಲ್ಲೆಡೆ ಸ್ವಾಮೀಜಿಯ ಭಾವಚಿತ್ರಗಳು ಇಂಗ್ಲೆಂಡಿನ ಇಕ್ಕೆಲ್ಲಾಗಳಲ್ಲಿ ರಾರಾಜಿಸುತ್ತಿದ್ದವು,
ಸ್ವಾಮೀಜಿಯ ಪ್ರಭೆ ಹೇಗಿತ್ತೆಂದರೆ ಸ್ವತಃ ಲಂಡನಿನ್ ರಾಣಿಯೇ ಮಾರುವೇಷದಲ್ಲಿ ಬಂದು ಭಾಷಣ ಕೇಳುತ್ತಿದ್ದರೆಂದರೆ ಯೋಚಿಸಿ ಸ್ವಾಮೀಜಿ ಅದೆಂತಹ ಮ್ಯಾಜಿಕ್ ಮಾಡಿರಬಹುದು..
ವಿದೇಶದಲ್ಲಿ ಇರುವಷ್ಟು ಕಾಲ ಸ್ವಾಮೀಜಿಗೆ ಸಿಕ್ಕ ಗೌರವ ಅಲ್ಲಿನ ಪತ್ರಿಕೆಗಳು ಬಣ್ಣಿಸಿದ ಪರಿ ನಿಜವಾಗಲೂ ದಾಸ್ಯದಲ್ಲಿ ನಲುಗುತ್ತಿದ್ದ ಭಾರತಕ್ಕೆ ಹೊಸ ಚೈತನ್ಯ ತುಂಬಿದ್ದರಲ್ಲಿ ಎರಡು ಮಾತಿಲ್ಲ.
ಅವರ ನೆಲದಲ್ಲೇ ನಿಂತು ನೀವು ಭಾರತಕ್ಕೆ ಮಾಡಿರೋ ಅನ್ಯಾಯಕ್ಕೆ ಅರಬ್ಬಿ ಸಮುದ್ರದಲ್ಲಿ ಇರುವ ಒಟ್ಟು ಕೇಸರನ್ನು ನಿಮ್ಮ ಮುಖಕ್ಕೆ ಎರಚಿದರು ,ನಿಮ್ಮ ಅನ್ಯಾಯಕ್ಕೆ ಸಲದಾಡು ಅಂತ ಆಕ್ರೋಶ ಭರಿತರಾಗಿ ನುಡಿತಾರೆ. ಅಂದರೇ ಭಾರತದ ನೆಲದಲ್ಲಿ ಕ್ರಿಸ್ಯನ್ ಅನ್ಯಾಯ,ಬ್ರಿಟಿಷರ ದಬ್ಬಾಳಿಕೆ ನೋಡಿ ಎಷ್ಟು ಆಕ್ರೋಶ ಬರಿತರಗಿದ್ದರೂ, ಭಾರತವನ್ನು ಈ ದಾಸ್ಯದಿಂದ ಮೇಲೆತ್ತಬೇಕೆಂದು ಪಟ್ಟ ಪರಿಶ್ರಮ ಅವರ ವಿದೇಶ ಕಾಲದಲ್ಲಿ ಬ್ರಿಟಿಷ್ ಕುಳಗಳೇ ಅವರ ಕಾಲಿಗೇರಗಿದ್ದೆ ಸಾಕ್ಷಿ,
ವಿವೇಕಾನಂದರು ಚಿಂತಿಸುತ್ತಿದ್ದ ರೀತಿ, ಸಮಾಜದ ಹಲವು ಕ್ರೂರ ಮುಖಗಳಿಗೆ ಕಪಾಳಕ್ಕೆ ಹೊಡೆದಂತೆ ಮಾಡುತಿದ್ದ ಭಾಷಣ , ಸತ್ತಿದ ಮನಸ್ಸುಗಳಿಗೆ ಜೀವ ತುಂಬುತ್ತಿದ್ದ ರೀತಿ, ಆ ದಿವ್ಯ ತೇಜಸ್ಸು, ನಿಜವಾಗಲೂ ಇವರು ಯುಗಕೊಬ್ಬರು
ಜ್ಞಾನಕ್ಕಾಗಿ ಭೀಕ್ಷೆ ಬೇಡು,ಅನ್ನಕ್ಕಾಗಿ ಎಂದು ಭೀಕ್ಷೆ ಬೇಡ:
ನಿನ್ನನ್ನ ನೀ ನಂಬು ಗೌರವಿಸು, ಸ್ವಾಭಿಮಾನಿಯಾಗಿ ಬದುಕು.
ಆಗ ನಿನ್ನ ಬದುಕು ಸಾರ್ಥಕತೆ ತಲುಪುವುದು. ನಿನ್ನ ದೇಶ ಸಂಸ್ಕೃತಿಯ ಪರಂಪರೆಯ ಹಿರಿಯರ ಬಗ್ಗೆ ನಿನಗೆ ಗೌರವ ಅಭಿಮಾನವಿಲ್ಲವೆಂದರೆ ,ಈ ದೇಶಕ್ಕಾಗಿ ನೀ ಎನ್ನಾದರು ನೀಡಲು ಸಾಧ್ಯವಿಲ್ಲ ಮತ್ತೆ ಗುಲಾಮನಾಗೆ ಬದುಕುವೆ.
ನಿನಗೆ ಮರ್ಯಾದೆ ಸಿಗದ ಜಾಗದಲ್ಲಿ ನಿನ್ನ ಚಪ್ಪಲಿಗಳನ್ನು ಬಿಡಬೇಡ. ಗುರಿ ಮುಟ್ಟುವ ತನಕ ನಿಲ್ಲಬೇಡ,ಏಳು ಎದ್ದೇಳು, ಒಂದೊಳ್ಳೆ ಯೋಜನೆಯ ಕನಸು ಕಾಣು, ಅದಕ್ಕಾಗಿ ನಿನ್ನಿಡಿ ಸರ್ವಸ್ವ,ಸಾಧನೆ ಕಷ್ಟವಲ್ಲ...
ಈಗೆ ವಿವೇಕಾನಂದರ ನೇರ ದಿಟ್ಟ ನುಡಿ, ದಿಟ್ಟತನ ನೋಡಿ ಎಂತವರಾದರು ದಂಗಾಗಲೇಬೇಕು , ಜೀವನದ ಹೊಸ ದಾರಿಗೆ ಅಣಿಯಾಗಲೇಬೇಕು ಅಂತಹ ಜೀವ ವಿವೇಕಾನಂದರು...
ಈಗಲೂ ಅವರ ಸಂದೇಶಗಳು ನಮಗೆ ಸ್ಫೂರ್ತಿ ನೀಡುತ್ತವೆ. ಅದನ್ನೇ ನಮ್ಮ ಬದುಕಿಗೆ ಅಳವಡಿಸಿಕೊಂಡರೆ ನಮ್ಮ ಜೀವನಕ್ಕೆ ಹೊಸ ಅರ್ಥ ಕೊಟ್ಟಂತೆ... ಅಲ್ಲವೇ!?.
ಧನ್ಯವಾದಗಳು..